ನವದೆಹಲಿ: ಏಷ್ಯಾ ಕಪ್ 2022 ರಲ್ಲಿ ಪಾಕಿಸ್ಥಾನದ ವಿರುದ್ಧ ಶ್ರೀಲಂಕಾ ಕ್ರಿಕೆಟ್ ತಂಡ ಅಭೂತಪೂರ್ವ ಗೆಲುವನ್ನು ದಾಖಲಿಸಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಕಷ್ಟದಲ್ಲೂ ಒಂದಿಷ್ಟು ಸಂತೋಷವನ್ನು ಈ ಗೆಲುವು ನೀಡಿದೆ. ಇನ್ನೊಂದೆಡೆ ತಾಲಿಬಾನಿಗಳ ಕೈಗೆ ಸಿಕ್ಕಿ ನರಳುತ್ತಿರುವ ಅಫ್ಘಾನ್ ಜನರು ಕೂಡ ಶ್ರೀಲಂಕಾ ಗೆಲುವನ್ನು ಸಂಭ್ರಮಿಸಿದ್ದು ತುಂಬಾ ವಿಶೇಷವಾಗಿತ್ತು.
ಅಫ್ಘಾನಿಸ್ತಾನದ ಜನರು ಶ್ರೀಲಂಕಾದ ಜಯವನ್ನು ಬೀದಿಗಿಳಿದು ಸಂಭ್ರಮಿಸಿದ್ದಾರೆ. ಭಾನುವಾರ ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾನುಕಾ ರಾಜಪಕ್ಸೆ ಅವರ ಅದ್ಭುತ ಅರ್ಧಶತಕ ಮತ್ತು ಸ್ಪಿನ್ನರ್ ವನಿಂದು ಹಸರಂಗ ಮತ್ತು ವೇಗಿ ಪ್ರಮೋದ್ ಮದುಶನ್ ಅವರ ಅಬ್ಬರದ ಸ್ಪೆಲ್ಗಳ ನೆರವಿನಿಂದ ಶ್ರೀಲಂಕಾ ತನ್ನ ಆರನೇ ಏಷ್ಯಾಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ, ಅದು ಪಾಕಿಸ್ಥಾನವನ್ನು 24 ರನ್ಗಳಿಂದ ಸೋಲಿಸಿತು.
ಅಫ್ಘಾನಿಸ್ಥಾನದ ಪತ್ರಕರ್ತ ಅಬ್ದುಲ್ಹಕ್ ಒಮೆರಿ ಅವರು ಹಂಚಿಕೊಂಡ ವೀಡಿಯೊದಲ್ಲಿ, ಶ್ರೀಲಂಕಾದ ಗೆಲುವಿನ ನಂತರ ಅಫ್ಘನ್ನರು ಹರ್ಷೋದ್ಗಾರಗಳೊಂದಿಗೆ ಸಂಭ್ರಮಿಸಿದ್ದಾರೆ. ಬೀದಿಯಲ್ಲಿ ಜಮಾಯಿಸಿದ ಹಲವರು ಸಂತೋಷದಿಂದ ನೃತ್ಯ ಮಾಡಿದ್ದಾರೆ. ಶ್ರೀಲಂಕಾದ ಗೆಲುವಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಸುರಿ ಮಳೆಗೈದಿದ್ದಾರೆ. ಫೈನಲ್ನಲ್ಲಿ ಪಾಕಿಸ್ತಾನಿ ತಂಡದ ಪ್ರದರ್ಶನವನ್ನು ವಿಶೇಷವಾಗಿ ಫೀಲ್ಡಿಂಗ್ ಅನ್ನು ಕುಹಕವಾಡಿದ್ದಾರೆ.
ಪಾಕಿಸ್ಥಾನವನ್ನು ಶತ್ರು ಎಂದೇ ಪರಿಗಣಿಸುವ ಅಫ್ಘಾನ್ ಜನತೆ ಅದರ ಪ್ರತಿ ಸೋಲನ್ನೂ ಸಂಭ್ರಮಿಸುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ.
Afghans across the world celebrate the well-deserved #AsiaCupCricket Championship victory by the great team of Sri Lanka @OfficialSLC. This is just one scene in Khost. Diversity, democracy and pluralism, and sports against intolerance and terrorism underpin the 🇦🇫🇱🇰 friendship. pic.twitter.com/2G8hg9GsSd
— M. Ashraf Haidari (@MAshrafHaidari) September 11, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.