ಚೆನ್ನೈ: ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯ ನೇತೃತ್ವ ವಹಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 10 ರಂದು ತಮಿಳುನಾಡಿನಲ್ಲಿ ಪ್ರಚೋದನಾಕಾರಿ ಹೇಳಿಕೆಗಳಿಗೆ ಹೆಸರುವಾಸಿಯಾದ ಕ್ರೈಸ್ಥ ಪಾದ್ರಿ ಪಡ್ರೆ ಜಾರ್ಜ್ ಪೊನ್ನಯ್ಯನನ್ನು ಭೇಟಿಯಾದರು. ಈ ವೇಳೆ “ಜೀಸಸ್ ಒಬ್ಬನೇ ನಿಜವಾದ ದೇವರು” ಎಂದು ರಾಹುಲ್ ಗಾಂಧಿಗೆ ಈತ ಹೇಳುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ.
ಕನ್ಯಾಕುಮಾರಿಯ ಮುಳಗುಮೂಡಿನಿಂದ ಪಾದಯಾತ್ರೆಯನ್ನು ಪುನರಾರಂಭಿಸಿದ ಗಾಂಧಿ, ಪೊನ್ನಯ್ಯ ಸೇರಿದಂತೆ ಪಾದ್ರಿಗಳ ಗುಂಪಿನೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ʼಜೀಸಸ್ ಒಬ್ಬನೇ ದೇವರುʼ ಎಂದು ಅವರು ರಾಹುಲ್ ಗಾಂಧಿಗೆ ಹೇಳಿದ್ದಾರೆ.
“ಜೀಸಸ್ ಕ್ರೈಸ್ಟ್ ಒಬ್ಬನೇ ದೇವರು, ಒಬ್ಬನೇ ನಿಜವಾದ ದೇವರು ಮತ್ತು ಶಕ್ತಿ ಮತ್ತು ಇತರ ಹಿಂದೂ ದೇವರುಗಳಂತೆ ಅಲ್ಲ” ಎಂದು ಪಡ್ರೆ ವೈರಲ್ ವಿಡಿಯೋದಲ್ಲಿ ಹೇಳುವುದನ್ನು ಕೇಳಬಹುದು.
ಪಾದ್ರಿ ಜಾರ್ಜ್ ಪೊನ್ನಯ್ಯ ತಮ್ಮ ಪ್ರಚೋದನಾಕಾರಿ ಭಾಷಣಗಳಿಂದ ಕುಖ್ಯಾತನಾಗಿದ್ದಾನೆ. ಕಳೆದ ವರ್ಷ ದ್ವೇಷದ ಭಾಷಣ ವಿಡಿಯೋ ವೈರಲ್ ಆದ ನಂತರ ಅವನನ್ನು ಬಂಧಿಸಲಾಗಿತ್ತು. ಇದಕ್ಕಾಗಿ ಕ್ಷಮೆಯನ್ನೂ ಕೇಳಿದ್ದ.
ಪೊನ್ನಯ್ಯ ಜೊತೆ ಸಂವಹನ ನಡೆಸಿದ್ದಕ್ಕಾಗಿ ಅನೇಕ ನೆಟ್ಟಿಗರು ಗಾಂಧಿಯನ್ನು ದೂಷಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರೊಬ್ಬರು, “ರಾಹುಲ್ ಗಾಂಧಿಯವರ ಈ ಹಿಂದೂ ದ್ವೇಷದ ಬಗ್ಗೆ ನಾವು ಆಶ್ಚರ್ಯಪಡಬೇಕಿಲ್ಲ. ಅವರ ನಡೆ ಆಶ್ಚರ್ಯವಾಗುವುದಿಲ್ಲ, ಆದರೆ ಈ ಇಟಲಿ ಮಗನಿಂದ ಭಾರತ ಮತ್ತು ಹಿಂದೂಗಳಿಗೆ ಇರುವ ಬೆದರಿಕೆಯನ್ನು ನೋಡಲಾಗದ ಹಿಂದೂಗಳಿದ್ದಾರೆ ಎಂಬುದರಿಂದ ನಾನು ಹೆಚ್ಚು ವಿಚಲಿತನಾಗಿದ್ದೇನೆ” ಎಂದಿದ್ದಾರೆ
ಇನ್ನೊಬ್ಬರು, “ರಾಹುಲ್ ಗಾಂಧಿಯವರ ಈ ನಿಲುವಿಗೆ ಆಶ್ಚರ್ಯಪಡಬೇಡಿ. ಅವರು ಹೃದಯದಲ್ಲಿ ಶುದ್ಧ ವ್ಯಾಟಿಕನ್” ಎಂದಿದ್ದಾರೆ.
Jesus Christ is the god, only real god, not like Sakthi & other Hindu gods – preaches George ponnaiya to Rahul Gandhi.
— Selva Kumar (@Selvakumar_IN) September 10, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.