ನವದೆಹಲಿ: ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸಂಪೂರ್ಣ ದ್ವಿಪಕ್ಷೀಯ ಸಂಬಂಧವನ್ನು ಚರ್ಚಿಸಲು ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರು ಸೆಪ್ಟೆಂಬರ್ 10-12 ರಿಂದ ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಈ ವೇಳೆ ಅವರು ರಾಜಕೀಯ, ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಹಕಾರ ಸಮಿತಿ (PSSC)ಯ ಚೊಚ್ಚಲ ಸಚಿವರ ಸಭೆಯ ಸಹ-ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತವಾಗಿ ಘೋಷಿಸಿದೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಎಚ್ಎಚ್ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರೊಂದಿಗೆ ಭಾರತ-ಸೌದಿ ಅರೇಬಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಕೌನ್ಸಿಲ್ನ ಚೌಕಟ್ಟಿನಡಿಯಲ್ಲಿ ಸಭೆಯನ್ನು ನಡೆಸಲಾಗುತ್ತದೆ. ಮಂತ್ರಿಗಳು ಸಂಪೂರ್ಣ ದ್ವಿಪಕ್ಷೀಯ ಸಂಬಂಧವನ್ನು ಪರಿಶೀಲಿಸುತ್ತಾರೆ ಮತ್ತು PSSC ಸಮಿತಿಯ ರಾಜಕೀಯ ಮತ್ತು ಕಾನ್ಸುಲರ್, ಕಾನೂನು ಮತ್ತು ಭದ್ರತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮತ್ತು ರಕ್ಷಣಾ ಸಹಕಾರದ ಪ್ರಗತಿಯನ್ನು ಚರ್ಚಿಸುತ್ತಾರೆ ಎಂದಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೌದಿಗೆ ತಮ್ಮ ಮೊದಲ ಭೇಟಿಯಲ್ಲಿ, ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾದ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ, ಭಾರತ ಮತ್ತು ಸೌದಿ ಅರೇಬಿಯಾ ರಾಜಕೀಯ, ಭದ್ರತೆ, ಇಂಧನ, ವ್ಯಾಪಾರ, ಹೂಡಿಕೆ, ಆರೋಗ್ಯ, ಆಹಾರ ಭದ್ರತೆ, ಸಾಂಸ್ಕೃತಿಕ ಮತ್ತು ರಕ್ಷಣಾ ಕ್ಷೇತ್ರಗಳು ಸೇರಿದಂತೆ ಹಲವಾರು ಅಂಶಗಳಲ್ಲಿ ತಮ್ಮ ಸಂಬಂಧಗಳನ್ನು ಗಣನೀಯವಾಗಿ ಬಲಪಡಿಸಿವೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಎರಡೂ ದೇಶಗಳ ಉನ್ನತ ನಾಯಕತ್ವವು ನಿಕಟ ಸಂಪರ್ಕದಲ್ಲಿತ್ತು.
External Affairs Minister, Dr S Jaishankar, will pay an official visit to the Kingdom of Saudi Arabia from 10-12 September. This will be his first visit to the Kingdom as External Affairs Minister of India: MEA pic.twitter.com/D1XiTJwuRc
— ANI (@ANI) September 9, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.