ಮುಂಬೈ: ಭಾರತದಲ್ಲಿ ಉಗ್ರವಾದಿಯ ಸಮಾಧಿಯನ್ನು ಅಲಂಕರಿಸುವವರೂ ಇದ್ದಾರೆ ಎಂದರೆ ನಂಬಲೇ ಬೇಕು. ಹೌದು ಮಹಾರಾಷ್ಟ್ರದಲ್ಲಿರುವ ನೇಣುಗೇರಲ್ಪಟ್ಟ ಉಗ್ರ ಯಾಕೂಬ್ ಮೆಮೋನ್ ಸಮಾಧಿ ಸುಂದರೀಕರಣಗೊಳ್ಳುತ್ತಿದೆ.
ಬಿಜೆಪಿ ನಾಯಕ ರಾಮ್ ಕದಮ್ ಅವರು ಯಾಕೂಬ್ ಮೆಮನ್ ಸಮಾಧಿಯ ಚಿತ್ರಗಳನ್ನು ಬುಧವಾರ ಹಾಕಿದ್ದು, ಮೆಮನ್ ಸಮಾಧಿಯನ್ನು ಮಜರ್ (ಇಸ್ಲಾಂನಲ್ಲಿ ಶ್ರದ್ಧಾಭಕ್ತಿಯ ಸ್ಥಳ) ಆಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಚಿತ್ರಗಳಲ್ಲಿ, ಮೆಮನ್ ಸಮಾಧಿಯಲ್ಲಿ ಸುಂದರೀಕರಣ ಕಾರ್ಯವನ್ನು ನಡೆಸುತ್ತಿರುವುದನ್ನು ನೋಡಬಹುದು.
ಮಾಧ್ಯಮಗಳೊಂದಿಗೆ ಮಾತನಾಡಿದ ರಾಮ್ ಕದಮ್, “1993 ರ ಬಾಂಬೆ ಬಾಂಬ್ ಸ್ಫೋಟವನ್ನು ಪಾಕಿಸ್ತಾನದ ಆಜ್ಞೆಯ ಮೇರೆಗೆ ಕಾರ್ಯಗತಗೊಳಿಸಿದ ಭಯೋತ್ಪಾದಕ ಯಾಕೂಬ್ ಮೆಮನ್ನ ಸಮಾಧಿ ಇದು, ಉದ್ಧವ್ ಠಾಕ್ರೆ ಸಿಎಂ ಆಗಿದ್ದಾಗ ಮಜರ್ ಆಗಿ ಪರಿವರ್ತನೆಗೊಂಡಿತು. ಮುಂಬೈ ಮೇಲಿನ ಪ್ರೀತಿ, ದೇಶಭಕ್ತಿ ಇದೆಯೇ? ಶರದ್ ಪವಾರ್, ರಾಹುಲ್ ಗಾಂಧಿ ಮತ್ತು ಠಾಕ್ರೆ ಮುಂಬೈ ಜನರಲ್ಲಿ ಕ್ಷಮೆ ಕೇಳಬೇಕು” ಎಂದಿದ್ದಾರೆ.
ಬಳಿಕ ಈ ಬಗ್ಗೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದು, ಮಹಾರಾಷ್ಟ್ರದ ಹಿಂದಿನ ಸರ್ಕಾರದ ವಿರುದ್ಧ ಜನರು ಕಿಡಿಕಾರುತ್ತಿದ್ದಾರೆ. ಪ್ರಸ್ತುತ ಸುಂದರೀಕರಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಅದಕ್ಕೆ ಅಳವಡಿಸಲಾಗಿದ್ದ ದೀಪಗಳನ್ನು ತೆಗೆದು ಹಾಕಲಾಗಿದೆ. ಅಲ್ಲದೇ ಈ ಬಗ್ಗೆ ಪೊಲೀಸರು ತನಿಖೆಯನ್ನೂ ನಡೆಸುತ್ತಿದ್ದಾರೆ.
Grave of terrorist Yakub Memon who executed 1993 Bombay bombings at Pakistan's behest, converted into a Mazar when Uddhav Thackeray was CM. Is this his love for Mumbai, patriotism? Sharad Pawar, Rahul Gandhi & he should apologise to people of Mumbai: Maharashtra BJP MLA Ram Kadam pic.twitter.com/OfJX3lKx2a
— ANI (@ANI) September 8, 2022
Maharashtra | Lighting arrangements that were put up at the grave of 1993 Mumbai blasts convict Yakub Memon are now being removed. Latest visuals from Bada Qabrastan in Mumbai. pic.twitter.com/i3rOi2VgVl
— ANI (@ANI) September 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.