ನವದೆಹಲಿ: ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ಇಂದು ಐತಿಹಾಸಿಕ “ರಾಜಪಥ್” ಅನ್ನು “ಕರ್ತವ್ಯ ಪಥ” ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ವಿಶೇಷ ಎನ್ಡಿಎಂಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಲೋಕಸಭೆ ಸಂಸದೆ ಹಾಗೂ ಎನ್ಡಿಎಂಸಿ ಸದಸ್ಯೆ ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
ಇಂದು ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ರಾಜ್ಪಥ್ ಅನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ನಾವು ಅನುಮೋದಿಸಿದ್ದೇವೆ ಎಂದು ಲೇಖಿ ಹೇಳಿದ್ದಾರೆ.
ರಾಜಪಥವನ್ನು “ಕರ್ತವ್ಯಪಥ್” ಎಂದು ಮರುನಾಮಕರಣ ಮಾಡಿರುವುದು ಸಾರ್ವಜನಿಕ ಸೇವೆಯ ಮನೋಭಾವವು ಆಡಳಿತದ ಹಕ್ಕು ಅಲ್ಲ ಕರ್ತವ್ಯ ಎಂಬುದನ್ನು ನೆನಪಿಸುತ್ತದೆ” ಎಂದು ಹೇಳಿದ್ದಾರೆ.
“ಈ ಮಹತ್ವದ ನಿರ್ಧಾರಕ್ಕೆ ಎಲ್ಲಾ ನಾಗರಿಕರಿಗೆ ಅಭಿನಂದನೆಗಳು. ಈ ಅಮೃತಕಾಲದಲ್ಲಿ ನಮ್ಮ ತಾಯಿನಾಡಿಗೆ ಸೇವೆ ಸಲ್ಲಿಸುವ ನಮ್ಮ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ” ಎಂದು ಅವರು ಹೇಳಿದ್ದಾರೆ.
Congratulations to all the citizens on this landmark decision. It shall reaffirm our commitment to serve our motherland in this #AmritKaal. #IndiaAt75
— Meenakashi Lekhi (@M_Lekhi) September 7, 2022
As we complete 75 yrs of Independence, it is only fitting to shed the colonial baggage & move towards India@100 in the #AmritKaal w our own legacy. The renaming of “Rajpath” to “Kartavyapath” is a reminder that d spirit of public service is not “right to rule” but “duty to serve” pic.twitter.com/7IwJW38Csi
— Meenakashi Lekhi (@M_Lekhi) September 7, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.