ತಿರುವನಂತಪುರಂ: ಮಲಯಾಳಂನಲ್ಲಿ ನಿರ್ಮಾಣಗೊಂಡಿರುವ ‘ಪೂಝ ಮುತಲ್ ಪುಝಾ ವರೇ’ ಸಿನಿಮಾವು ಮಲಬಾರ್ ಹಿಂದೂ ನರಮೇಧವನ್ನು ಆಧರಿಸಿದ್ದು, ಇದರ ಹಲವು ತುಣುಕುಗಳಿಗೆ ಕತ್ತರಿ ಹಾಕುವಂತೆ ಕೇರಳ ಸೆನ್ಸಾರ್ ಮಂಡಳಿ ಶಿಫಾರಸ್ಸು ಮಾಡಿದೆ. ಇದಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರು ಮಲಬಾರ್ ಹಿಂದೂ ನರಮೇಧವನ್ನು ಆಧರಿಸಿದ ಚಲನಚಿತ್ರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಟ್ವಿಟರ್ನಲ್ಲಿ ಆರ್ಎಸ್ಎಸ್ ಮುಖಂಡ ಜೆ ನಂದಕುಮಾರ್ ಅವರು ಸಿನಿಮಾ ನಿರ್ದೇಶಕ ಅಲಿ ಅಕ್ಬರ್ ಅವರನ್ನು ಬೆಂಬಲಿಸಿದ್ದಾರೆ. ನಿಜ ಘಟನೆಗಳ ಉಲ್ಲೇಖಗಳನ್ನು ಸಿನಿಮಾದಿಂದ ಅಳಿಸಲು ಚಲನಚಿತ್ರ ನಿರ್ಮಾಪಕರಿಗೆ ಒತ್ತಾಯಿಸುವುದು ಘೋರ ಅನ್ಯಾಯ ಎಂದು ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡ ನಂತರ ತನ್ನ ಹೆಸರನ್ನು ರಾಮಸಿಂಹನ್ ಅಬೂಬಕ್ಕರ್ ಎಂದು ಬದಲಾಯಿಸಿಕೊಂಡಿರುವ ಅಲಿ ಅಕ್ಬರ್, ಸಿನಿಮಾಕ್ಕೆ ಕತ್ತರಿ ಹಾಖುವಂತೆ ಆದೇಶಿಸಿರುವ ಸೆನ್ಸಾರ್ ಮಂಡಳಿ ಕ್ರಮದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ದೃಶ್ಯಗಳಿಗೆ ಕತ್ತರಿ ಹಾಕುವುದರಿಂದ ಮಲಬಾರ್ ಮುಸ್ಲಿಮರಿಂದ ಹಿಂದೂಗಳು ಅನುಭವಿಸಿದ ಕ್ರೌರ್ಯದ ನಿಜಾಂಶ ಮಂಕಾಗುತ್ತದೆ ಎಂದಿದ್ದಾರೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ನಂದಕುಮಾರ್, “ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ನ ಕೇರಳ ವಿಭಾಗವು ಸಮಾಜವನ್ನು ಕೋಮು ಮತ್ತು ಜಾತಿ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿರುವ ಅನೇಕ ಚಲನಚಿತ್ರಗಳನ್ನು ಅನುಮೋದಿಸಿದೆ. ಆದರೆ ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ಹಿಂದೂ ಸಮಾಜದ ವಿರುದ್ಧ ಇಸ್ಲಾಮಿಸ್ಟ್ ಕ್ರೌರ್ಯದ ಸಾರಾಂಶ ಹೊಂದಿರುವ ಪುಝು ನಂತಹ ಚಲನಚಿತ್ರಗಳಿಗೆ ಕತ್ತರಿ ಪ್ರಯೋಗಿಸಲು ಸೂಚಿಸಿದೆ. ಪ್ರಸ್ತುತ ಸೆನ್ಸಾರ್ ಮಂಡಳಿಯ ಕೇರಳ ಪ್ರಾದೇಶಿಕ ಅಧಿಕಾರಿಯ ಅವಧಿಯಲ್ಲಿ ದೇಶವಿರೋಧಿ, ದೇಶದ್ರೋಹಿ ಮತ್ತು ಕೋಮುವಾದಿ ಚಲನಚಿತ್ರಗಳು ಸೆನ್ಸಾರ್ ಮಾಡದೆಯೇ ಪ್ರಮಾಣಪತ್ರವನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ” ಎಂದಿದ್ದಾರೆ.
“ಸರ್ಕಾರ ಮತ್ತು ಸಂವಿಧಾನದ ಬಗ್ಗೆ ದೇಶದ್ರೋಹಿ ಹೇಳಿಕೆಗಳನ್ನು ಒಳಗೊಂಡಿರುವ ಜನಗಣಮನ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಹೇಗೆ? ಭಾರತದಲ್ಲಿ ನೋಟುಗಳಷ್ಟೇ ಅಲ್ಲ, ಮತಗಳನ್ನೂ ನಿಷೇಧಿಸಲಾಗುವುದು ಎಂದು ಜನಗಣಮನ ಹೇಳಿದೆ” ಎಂದಿದ್ದಾರೆ.
ಕೇರಳದಲ್ಲಿ ತಯಾರಾದ ಮತ್ತು ಬಿಡುಗಡೆಯಾಗುವ ಬಹುತೇಕ ಚಲನಚಿತ್ರಗಳು ರಾಜಕೀಯ ಉದ್ದೇಶವನ್ನು ಹೊಂದಿವೆ ಮತ್ತು ಸಮಾಜವನ್ನು ವಿಭಜಿಸಲು ಬಯಸುವ ಇಸ್ಲಾಮಿಸ್ಟ್ ಅಥವಾ ಕಮ್ಯುನಿಸ್ಟರ ಕೈವಾಡವನ್ನು ಇವು ಹೊಂದಿವೆ ಎಂದು ನಂದಕುಮಾರ್ ಆರೋಪಿಸಿದ್ದಾರೆ. ಇಂತಹ ಸಿನಿಮಾಗಳು ಬಿಜೆಪಿ ಮತ್ತು ಕೇಂದ್ರದ ವಿರುದ್ಧ ದುರುದ್ದೇಶಪೂರಿತ ಮತ್ತು ಅಸಹ್ಯಕರ ಟೀಕೆಗಳನ್ನು ಒಳಗೊಂಡಿರುತ್ತವೆ ಎಂದು ಹೇಳಿದ್ದಾರೆ.
Censor Board Kerala has approved a hell of a lot of feature films promoting social communalism and racism that seek to divide society on the lines of caste. It has certified films like JanaGanaMana and Puzhu, which pushed Islamist narrative of Indian democracy & Hindu society 1/n
— J Nandakumar (@kumarnandaj) September 6, 2022
During the tenure of the present Censor Board Kerala regional officer, a slew of anti-national, seditious and communal movies managed to get certification without 'censoring'. JanaGanaMana, which contains seditious remarks about Govt and Constitution got certificate. How? 2/n
— J Nandakumar (@kumarnandaj) September 6, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.