ನವದೆಹಲಿ: ವಿಶ್ವದಾದ್ಯಂತ ಇರುವ ಚಾರ್ಟರ್ಡ್ ಅಕೌಂಟೆಂಟ್ಗಳಿಗೆ ಬ್ರಾಂಡ್ ಇಂಡಿಯಾದ ರಾಯಭಾರಿಗಳಾಗುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಇಂದು ಕರೆ ಮಾಡಿದ್ದಾರೆ.
ಅವರು ಅಮೆರಿಕಾದ 6 ಪ್ರಾಂತ್ಯಗಳಲ್ಲಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಟ್ (ಐಸಿಎಐ) ಕಚೇರಿಗಳನ್ನು ಆರಂಭಿಸಿದ ನಂತರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೃತ್ತಿಯನ್ನು ಮತ್ತಷ್ಟು ಮುಂದೆ ಕೊಂಡೊಯ್ಯಲು ಐಸಿಎಐನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿರುವುದಕ್ಕೆ ಸಚಿವರು ಅವರನ್ನು ಅಭಿನಂದಿಸಿದರು.
ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಗೋಯಲ್, ಭಾರತವು ಮತ್ತಷ್ಟು ಶಕ್ತಿಯುತವಾಗಿ ಬೆಳೆದು ಬಲವರ್ಧನೆ ಮಾಡಿಕೊಳ್ಳಲು ಮತ್ತು ಭೌಗೋಳಿಕ ರಾಜಕೀಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲು ಮುಂದಿನ 25 ವರ್ಷಗಳ ಕಾಲ ಬಹಳ ನಿರ್ಣಾಯಕ ಕಾಲ ಎಂದು ಅವರು ಹೇಳಿದರು. ಭಾರತದ ಈ ಪಯಣದಲ್ಲಿ ಐಸಿಎಐ ಕೂಡ ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಅವರು ಐಸಿಎಐ ನೂರನೇ ಅಂತಾರಾಷ್ಟ್ರೀಯ ಕಚೇರಿಯನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.
ವಿಶ್ವದಾದ್ಯಂತ ಚಾರ್ಟರ್ಡ್ ಅಕೌಂಟೆಂಟ್ಗಳು ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಬಲವಾಗಿ ಪ್ರಸ್ತಾಪಿಸಿದ ಸಚಿವರು, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಪರರು ಪ್ರಾಮಾಣಿಕತೆಯ ಪಾಲಕರು ಎಂದು ಬಣ್ಣಿಸಿದರು. ಸಿಎ ಸಹಿಯ ಮಹತ್ವವನ್ನು ಉಲ್ಲೇಖಿಸಿದ ಪಿಯೂಷ್ ಗೋಯಲ್ ಅವರು ಪ್ರಾಮಾಣಿಕತೆ ಮತ್ತು ದಕ್ಷತೆಯ ಸಂಕೇತವಾಗಿದೆ, ಈ ಸಹಿಯ ಮೌಲ್ಯವು ಸಿಎಗಳ ಕಾರ್ಯವನ್ನು ಇನ್ನಷ್ಟು ಗಂಭೀರ ಮತ್ತು ನಿರ್ಣಾಯಕಗೊಳಿಸಿದೆ ಎಂದರು.
118 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2022 ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆಯಲಿರುವ 21 ನೇ ವಿಶ್ವ ಲೆಕ್ಕಪರಿಶೋಧಕರ ಸಮಾವೇಶವನ್ನು ಉಲ್ಲೇಖಿಸಿದ ಪಿಯೂಷ್ ಗೋಯಲ್, ಭಾರತವು ಜಿ-20 ರ ಉತ್ತುಂಗದಲ್ಲಿ ನಡೆದಾಗ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಹಲವು ರಾಷ್ಟ್ರಗಳ ಒಡನಾಟದಲ್ಲಿ ಭಾರತದ ಮನ್ನಣೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ತಲ್ಲಣಗೊಂಡಿರುವ ಭಾರತವು ಸ್ಥಿರವಾದ ದ್ವೀಪವಾಗಿದೆ ಎಂದು ನಮೂದಿಸಿದ ಸಚಿವರು, ಭಾರತವು ಇಂದು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದೆ. ಹಣದುಬ್ಬರದ ಮೇಲೆ ಭಾರತದ ನಿರಂತರ ನಿಗಾವಹಿಸುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಪಿಯೂಷ್ ಗೋಯಲ್ ಅವರು 2014 ರಿಂದ ಹಣದುಬ್ಬರವು ಆರ್ ಬಿಐನ ಪ್ರಾಥಮಿಕ ಆದ್ಯತೆಯಾಗಿದೆ ಎಂದು ಸರ್ಕಾರ ಖಾತ್ರಿಪಡಿಸಿದೆ ಮತ್ತು 2014 ರಿಂದ ಭಾರತವು ಸರಾಸರಿ ಶೇ 4.5% ಹಣದುಬ್ಬರವನ್ನು ಕಂಡಿದೆ, ಇದು ಸ್ವಾತಂತ್ರ್ಯದ ನಂತರ ಕಳೆದ 8 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದರು.
Minister @PiyushGoyal launched 6 representative offices of @TheICAI in USA.
With game-changing economic reforms in India, he urged Chartered Accountants to present the tremendous investment opportunities back home to their clients & be ambassadors of Brand India. pic.twitter.com/YDA7aPxqBl
— Piyush Goyal Office (@PiyushGoyalOffc) September 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.