ನವದೆಹಲಿ: ಪ್ರಧಾನ ಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ (PM-SHRI) ಯೋಜನೆ ಅಡಿಯಲ್ಲಿ ದೇಶಾದ್ಯಂತ 14,500 ಶಾಲೆಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಹೊಸ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಸರಣಿ ಟ್ವಿಟ್ ಮಾಡಿರುವ ಮೋದಿ, ಪಿಎಂ-ಶ್ರೀ ಯೋಜನೆಯ ಮೂಲಕ ಭಾರತದಲ್ಲಿ 14,500 ಶಾಲೆಗಳ ಅಭಿವೃದ್ಧಿ ಮತ್ತು ಉನ್ನತೀಕರಣ ಮಾಡುವುದಾಗಿ ತಿಳಿಸಿದ್ದಾರೆ.
ಹೊಸ ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ಅಳವಡಿಸಿಕೊಂಡಿರ ಪಿಎಂ ಶ್ರೀ ಶಾಲೆಗಳಿಂದ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನ
ನವೀನ ತಂತ್ರಜ್ಞಾನ, ಸ್ಮಾರ್ಟ್ ತರಗತಿಗಳು, ಕ್ರೀಡೆ ಮತ್ತು ವಿಶ್ವ ದರ್ಜೆಯ ಆಧುನಿಕ ಮೂಲಸೌಕರ್ಯಗಳಿಂದ ಸುಸಜ್ಜಿತಗೊಳ್ಳಲಿದೆ ಈ ಶಾಲೆಗಳು
ಪಿಎಂ-ಶ್ರೀ ಶಾಲೆಗಳು ಶಿಕ್ಷಣವನ್ನು ನೀಡುವ ಆಧುನಿಕ, ಪರಿವರ್ತನೆಯ ಮತ್ತು ಸಮಗ್ರ ವಿಧಾನವನ್ನು ಹೊಂದಿರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಉತ್ಸಾಹದಲ್ಲಿ ಪಿಎಂ-ಶ್ರೀ ಶಾಲೆಗಳು ದೇಶಾದ್ಯಂತ ಲಕ್ಷಗಟ್ಟಲೆ ವಿದ್ಯಾರ್ಥಿಗಳಿಗೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತವೆ ಎಂಬುದು ನನಗೆ ಖಚಿತವಾಗಿದೆ ಎಂದು ಮೋದಿ ಹೇಳಿದ್ದಾರೆ.
ಆವಿಷ್ಕಾರ ಆಧಾರಿತ, ಕಲಿಕೆ ಕೇಂದ್ರಿತ ಬೋಧನೆಗೆ ಒತ್ತು ನೀಡಲಾಗುವುದು ಎಂದರು. ಅತ್ಯಾಧುನಿಕ ತಂತ್ರಜ್ಞಾನ, ಸ್ಮಾರ್ಟ್ ಕ್ಲಾಸ್ ರೂಂಗಳು, ಕ್ರೀಡೆಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಆಧುನಿಕ ಮೂಲಸೌಕರ್ಯಗಳ ಮೇಲೂ ಗಮನ ಹರಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕ್ಷೇತ್ರವನ್ನು ಬದಲಾಯಿಸಿದೆ ಎಂದು ಅವರು ಹೇಳಿದರು.
Today, on #TeachersDay I am glad to announce a new initiative – the development and upgradation of 14,500 schools across India under the Pradhan Mantri Schools For Rising India (PM-SHRI) Yojana. These will become model schools which will encapsulate the full spirit of NEP.
— Narendra Modi (@narendramodi) September 5, 2022
The National Education Policy has transformed the education sector in the recent years. I am certain that the PM-SHRI schools will further benefit lakhs of students across India in the spirit of NEP.
— Narendra Modi (@narendramodi) September 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.