ಕೊಚ್ಚಿ: ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಅನ್ನು ಇಂದು ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಾರಂಭಗೊಳಿಸಿದರು.
ಈ ವೇಳೆ ಮಾತನಾಡಿದ ಮೋದಿ, ಇಂದು ಭಾರತವು ದೇಶೀಯ ತಂತ್ರಜ್ಞಾನದೊಂದಿಗೆ ಬೃಹತ್ ವಿಮಾನವಾಹಕ ನೌಕೆಯನ್ನು ತಯಾರಿಸುವ ವಿಶ್ವದ ಕೆಲವೇ ದೇಶಗಳಿಗೆ ಸೇರಿಕೊಂಡಿದೆ. ಇಂದು ಐಎನ್ಎಸ್ ವಿಕ್ರಾಂತ್ ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದೆ, ದೇಶದಲ್ಲಿ ಹೊಸ ಆತ್ಮವಿಶ್ವಾಸವನ್ನು ಮೂಡಿಸಿದೆ ಎಂದರು.
ಐಎನ್ಎಸ್ ವಿಕ್ರಾಂತ್ ಅನ್ನು ಭಾರತ ಆತ್ಮನಿರ್ಭರವಾಗುತ್ತಿರುವುದರ ವಿಶಿಷ್ಟ ಪ್ರತಿಬಿಂಬ ಎಂದು ಕರೆದ ಪ್ರಧಾನಿ, “ಗುರಿಗಳು ತ್ವರಿತವಾಗಿದ್ದರೆ, ಪ್ರಯಾಣಗಳು ದೀರ್ಘವಾಗಿದ್ದರೆ, ಸಾಗರ ಮತ್ತು ಸವಾಲುಗಳು ಅಂತ್ಯವಿಲ್ಲದಾದರೆ ಆಗ ಭಾರತದ ಉತ್ತರ ವಿಕ್ರಾಂತ್. ಸ್ವಾತಂತ್ರ್ಯದ ಅಮೃತದ ಅನುಪಮವಾದ ಅಮೃತ ವಿಕ್ರಾಂತ. ವಿಕ್ರಾಂತ್ ಭಾರತ ಸ್ವಾವಲಂಬಿಯಾಗುವುದರ ವಿಶಿಷ್ಟ ಪ್ರತಿಬಿಂಬವಾಗಿದೆ.
INS ವಿಕ್ರಾಂತ್ ದೇಶದ ನೌಕಾ ಬಲವನ್ನು ಹೆಚ್ಚಿಸಲು ಸಜ್ಜಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ಯುದ್ಧನೌಕೆಯನ್ನು “ಚಲನೆಯಲ್ಲಿರುವ ನಗರ” ಎಂದೇ ಗುರುತಿಸಲಾಗಿದೆ.
ಭಾರತದಲ್ಲಿ ನಿರ್ಮಾಣವಾಗಿರುವ ಅತಿದೊಡ್ಡ ಯುದ್ಧನೌಕೆ ಐಎನ್ಎಸ್ ವಿಕ್ರಾಂತ್ 262 ಮೀಟರ್ ಉದ್ದ ಮತ್ತು 62 ಮೀಟರ್ ಅಗಲವಿದೆ. ರಷ್ಯಾದ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾದ ಐಎನ್ಎಸ್ ವಿಕ್ರಮಾದಿತ್ಯ ನಂತರ ಇದು ದೇಶದ ಎರಡನೇ ವಿಮಾನವಾಹಕ ನೌಕೆಯಾಗಿದೆ.
ಯುದ್ಧನೌಕೆಯು ಎರಡು ಫುಟ್ಬಾಲ್ ಮೈದಾನಗಳಷ್ಟು ದೊಡ್ಡದು ಮತ್ತು 18 ಮಹಡಿಯಷ್ಟು ಎತ್ತರವಿದೆ>
ಈ ವಿಮಾನವಾಹಕ ನೌಕೆಯ ಹ್ಯಾಂಗರ್ ಎರಡು ಒಲಿಂಪಿಕ್ ಗಾತ್ರದ ಪೂಲ್ಗಳಷ್ಟು ದೊಡ್ಡದಾಗಿದೆ. ಆರಂಭದಲ್ಲಿ, ಯುದ್ಧನೌಕೆ ಮಿಗ್ ಫೈಟರ್ ಜೆಟ್ಗಳು ಮತ್ತು ಕೆಲವು ಹೆಲಿಕಾಪ್ಟರ್ಗಳನ್ನು ಒಯ್ಯುತ್ತದೆ. ಯುದ್ಧನೌಕೆಯ ಆಜ್ಞೆಯನ್ನು ಪಡೆದ ನಂತರ ನೌಕಾಪಡೆಯು ವಾಯುಯಾನ ಪ್ರಯೋಗಗಳನ್ನು ನಡೆಸುತ್ತದೆ.
INS ವಿಕ್ರಾಂತ್ 1,600 ಸಿಬ್ಬಂದಿ ಮತ್ತು 30 ವಿಮಾನಗಳಿಗೆ ಅವಕಾಶ ಕಲ್ಪಿಸುತ್ತದೆ. ಗಂಟೆಗೆ 3,000 ಚಪಾತಿ ತಯಾರಿಸುವ ಯಂತ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.
16 ಹಾಸಿಗೆಗಳ ಆಸ್ಪತ್ರೆ, 250 ಟ್ಯಾಂಕರ್ ಇಂಧನ ಮತ್ತು 2,400 ಕಂಪಾರ್ಟ್ಮೆಂಟ್ಗಳನ್ನು ಇದು ಹೊಂದಿದೆ. ಇದರ ನಿರ್ಮಾಣಕ್ಕೆ ಒಂದು ದಶಕಗಳೇ ಬೇಕಾಯಿತು.
Vikrant is large and grand, Vikrant is distinct, Vikrant is special. Vikrant is not just a warship, it is the evidence of the hardwork, talent, impact and commitment of India of the 21st century: Prime Minister Narendra Modi in Kochi, Kerala#INSVikrant pic.twitter.com/0pu8hasPNt
— ANI (@ANI) September 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.