ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವೇದಿಕೆಯ ಮಾಸಿಕ ವಹಿವಾಟುಗಳ ಸಂಖ್ಯೆಯು 2022 ರ ಆಗಸ್ಟ್ ತಿಂಗಳಲ್ಲಿ 6.57 ಶತಕೋಟಿಯನ್ನು ಮುಟ್ಟಿದೆ, ಹಿಂದಿನ ತಿಂಗಳಿಗಿಂತ ವಹಿವಾಟು ಸ್ವಲ್ಪ ಹೆಚ್ಚಾಗಿದೆ.
UPI ಪ್ಲಾಟ್ಫಾರ್ಮ್ನಲ್ಲಿ ಆಗಸ್ಟ್ 2022 ರಲ್ಲಿ 10.72 ಲಕ್ಷ ಕೋಟಿ ರೂಪಾಯಿ ಮೌಲ್ಯದ 6.57 ಬಿಲಿಯನ್ ವಹಿವಾಟುಗಳು ನಡೆದಿದೆ.
ಯುಪಿಐ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಡೇಟಾ ಪ್ರಕಾರ, ಜೂನ್ನಲ್ಲಿ ರೂ. 10.14 ಲಕ್ಷ ಕೋಟಿ ಮೌಲ್ಯದ ಸುಮಾರು 5.86 ಬಿಲಿಯನ್ ವಹಿವಾಟುಗಳು ವರದಿಯಾಗಿದೆ.
UPI ಜುಲೈನಲ್ಲಿ ಮೊದಲ ಬಾರಿಗೆ 6 ಶತಕೋಟಿ ವಹಿವಾಟು ಮಾರ್ಕ್ ಅನ್ನು ಮುಟ್ಟಿತ್ತು. 10.62 ಲಕ್ಷ ಕೋಟಿ ಮೌಲ್ಯದ 6.28 ಬಿಲಿಯನ್ ವಹಿವಾಟುಗಳನ್ನು ನೋಂದಾಯಿಸಿತ್ತು.
ಪ್ಲಾಟ್ಫಾರ್ಮ್ 2016 ರಲ್ಲಿ ಪ್ರಾರಂಭವಾದ ಮೂರು ವರ್ಷಗಳ ನಂತರ ಅಕ್ಟೋಬರ್ 2019 ರಲ್ಲಿ ಮೊದಲ ಬಾರಿಗೆ 1 ಬಿಲಿಯನ್ ವಹಿವಾಟುಗಳನ್ನು ಮೀರಿದೆ.
ಪ್ಲಾಟ್ಫಾರ್ಮ್ 2021-22 ರ ಹಣಕಾಸು ವರ್ಷದಲ್ಲಿ 84.17 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೊತ್ತದ 46 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.