ನವದೆಹಲಿ: ದೆಹಲಿಯ ಅಬಕಾರಿ ನೀತಿಯ ವಿವಾದದ ನಡುವೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಅಧಿಕಾರದ ಅಮಲು ಮತ್ತು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಚಿಸಿದ ಚಳವಳಿಯ ಸಿದ್ಧಾಂತಗಳು ಮತ್ತು ಮೌಲ್ಯಗಳನ್ನು ಮರೆತಿದ್ದೀರಿ ಎಂದು ಟೀಕಿಸಿದ್ದಾರೆ.
ಕೇಜ್ರಿವಾಲ್ ದೆಹಲಿ ಸಿಎಂ ಆದ ನಂತರ ತಮ್ಮ ಸಿದ್ಧಾಂತವನ್ನು ಮರೆತಿದ್ದಾರೆ ಎಂದು ಹಜಾರೆ ಪತ್ರದ ಮೂಲಕ ಅಸಮಾಧಾನ ತೋಡಿಕೊಂಡಿದ್ದಾರೆ.
“ನೀವು ಮುಖ್ಯಮಂತ್ರಿಯಾದ ನಂತರ ನಾನು ನಿಮಗೆ ಮೊದಲ ಬಾರಿಗೆ ಪತ್ರ ಬರೆಯುತ್ತಿದ್ದೇನೆ. ಮದ್ಯ ಹಗರಣದ ಬಗ್ಗೆ ದೆಹಲಿ ಸರ್ಕಾರದ ಇತ್ತೀಚಿನ ಸುದ್ದಿ ನಿರಾಶೆ ಮೂಡಿಸಿದೆ. ನಾನು ಗಾಂಧೀಜಿ ಮತ್ತು ಅವರ ಸಿದ್ಧಾಂತದಿಂದ ಸ್ಫೂರ್ತಿ ಪಡೆದಿದ್ದೇನೆ. ಇದರ ಆಧಾರದ ಮೇಲೆ ನಾನು ನನ್ನ ಜೀವನವನ್ನು ಜನರು, ಸಮಾಜ ಮತ್ತು ದೇಶಕ್ಕಾಗಿ ಮುಡಿಪಾಗಿಟ್ಟಿದ್ದೇನೆ, ಕಳೆದ 47 ವರ್ಷಗಳಿಂದ ನಾನು ಸಮಾಜ ಮತ್ತು ಭ್ರಷ್ಟಾಚಾರದ ಉನ್ನತಿಗಾಗಿ ಕೆಲಸ ಮಾಡುತ್ತಿದ್ದೇನೆ” ಎಂದಿದ್ದಾರೆ.
ಅಲ್ಲದೇ ದೆಹಲಿ ಸಿಎಂಗೆ ತಮ್ಮ ‘ಸ್ವರಾಜ್’ ಪುಸ್ತಕದ ತಮ್ಮದೇ ಆದ ಸಾಲುಗಳನ್ನು ನೆನಪಿಸಿಕೊಟ್ಟಿದ್ದಾರೆ.
ಕೇಜ್ರಿವಾಲ್ ರಾಜಕೀಯ ಸೇರುವ ಮುನ್ನ 2012ರಲ್ಲಿ ‘ಸ್ವರಾಜ್’ ಪುಸ್ತಕ ಬರೆದಿದ್ದರು.
“ರಾಜಕೀಯಕ್ಕೆ ಕಾಲಿಡುವ ಮುನ್ನ ‘ಸ್ವರಾಜ್’ ಪುಸ್ತಕ ಬರೆದಿದ್ದೀರಿ, ನಾನು ಆ ಪುಸ್ತಕದ ಮುನ್ನುಡಿ ಬರೆದಿದ್ದೇನೆ, ಆ ಪುಸ್ತಕದಲ್ಲಿ ಗ್ರಾಮಸಭೆ, ಮದ್ಯ ನೀತಿಯ ಬಗ್ಗೆ ಹೇಳಿದ್ದೀರ. ಅದನ್ನು ನಿಮಗೆ ನೆನಪು ಮಾಡುತ್ತಿದ್ದೇನೆ” ಎಂದಿದ್ದಾರೆ.
ದೆಹಲಿಯ ಹೊಸ ಅಬಕಾರಿ ನೀತಿಯನ್ನು ಟೀಕಿಸಿದ ಅವರು, ಇದು ಮದ್ಯದ ಮಾರಾಟ ಮತ್ತು ಸೇವನೆಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು. ನಗರದ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಎಂದು ಅವರು ಬರೆದಿದ್ದಾರೆ.
Anna Hazare writes to Delhi CM Kejriwal over New Liquor Policy
"Had expected a similar policy(like Maharashtra's). But you didn't do it.People seem to be trapped in a circle of money for power&power for money. It doesn't suit a party that emerged from a major movement,"he writes pic.twitter.com/4yTvc0XI5K
— ANI (@ANI) August 30, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.