News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪ್ರಯೋಗದ ವೇಳೆ ಗಂಟೆಗೆ 180 ಕಿಮೀ ವೇಗ ದಾಖಲಿಸಿದ ʼವಂದೇ ಭಾರತ್‌ʼ ರೈಲು

ನವದೆಹಲಿ: ಭಾರತದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರ ಪರೀಕ್ಷಾರ್ಥ ಪ್ರಯೋಗಕ್ಕೆ ಒಳಗಾಗಿದೆ. ಈ ಸಮಯದಲ್ಲಿ ಅದು 180 ಕಿಮೀ ವೇಗದ ಮಿತಿಯನ್ನು ದಾಟಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದೆ ಎಂದು ವರದಿಗಳು ತಿಳಿಸಿವೆ.

ಕೇಂದ್ರ ರೈಲ್ವೇ ಸಚಿವ ಅಶ್ವನಿ ವೈಷ್ಣವ್ ಅವರು ಈ ಬಗ್ಗೆ ತಮ್ಮ ಟ್ವಿಟರ್‌ ಮಾಡಿದ್ದು,” ವಂದೇಭಾರತ್-2 ವೇಗದ ಪ್ರಯೋಗವು ಕೋಟಾ – ನಾಗ್ಡಾ ವಿಭಾಗದ ನಡುವೆ 120 ಕಿಮೀ ವೇಗದೊಂದಿಗೆ130/150 ಮತ್ತು 180 ಕಿಮೀ ವೇಗದವರೆಗೂ ಸಾಗಿದೆ. ವಂದೇ ಭಾರತ್ ರೈಲಿನ ಪ್ರಾಥಮಿಕ ತಪಾಸಣೆ ವೇಳೆ ವಾಷಿಂಗ್ ಪಿಟ್  ಶುಚಿಗೊಳಿಸಲಾಯಿತು. ಇದಲ್ಲದೇ, ರೈಲಿನ ಎಲ್ಲ ಉಪಕರಣಗಳು ಮತ್ತು ಪ್ಯಾನಲ್‌ಗಳನ್ನು ಸಹ ಪರಿಶೀಲಿಸಲಾಯಿತು. ವಂದೇ ಭಾರತ್‌ನ ವೇಗ ಪ್ರಯೋಗವನ್ನು ಕೋಟಾ – ನಾಗ್ಡಾ ರೈಲ್ವೆ ವಿಭಾಗದಲ್ಲಿ ವಿವಿಧ ವೇಗದ ಹಂತಗಳಲ್ಲಿ ನಡೆಸಿ ಸಾಮರ್ಥ್ಯವನ್ನು ಪುನಃ ಪುನಃ ಪರಿಶೀಲನೆ ನಡೆಸಲಾಯಿತು” ಎಂದಿದ್ದಾರೆ.

RDSO ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆಯ ತಂಡವು ಹೊಸದಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ರೈಲು ಸೆಟ್‌ನೊಂದಿಗೆ ಗರಿಷ್ಠ 180 kmph ಪರೀಕ್ಷಾ ವೇಗದೊಂದಿಗೆ ರೈಲಿನ 16 ಕೋಚ್‌ಗಳ ಮೂಲ ಮಾದರಿಯ ರೇಕ್‌ಗಳೊಂದಿಗೆ ಈ ಪ್ರಯೋಗ ಕೈಗೊಳ್ಳಲಾಗಿದೆ.

ಹಲವು ಕಡೆ 180 ಕಿ.ಮೀ ವೇಗವನ್ನು ಮುಟ್ಟಿದ ವಂದೇ ಎಕ್ಸ್​​ಪ್ರೆಸ್ ರೈಲು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಇದು ಸೆಮಿ ಹೈ-ಸ್ಪೀಡ್ ರೈಲಾಗಿದೆ. ವಂದೇ ಭಾರತ್ ರೈಲು ಸ್ವಯಂ ಚಾಲಿತ ಎಂಜಿನ್ ಹೊಂದಿರುವ ಟ್ರೇನ್​ ಆಗಿದೆ. ಅಂದರೆ, ಇದು ಪ್ರತ್ಯೇಕ ಎಂಜಿನ್ ಹೊಂದಿಲ್ಲ. ಇದು ಸ್ವಯಂಚಾಲಿತ ಬಾಗಿಲುಗಳು ಮತ್ತು ಹವಾನಿಯಂತ್ರಿತ ಚೇರ್ ಕಾರ್ ಕೋಚ್‌ಗಳನ್ನು ಹೊಂದಿದೆ. ಅಷ್ಟೇ ಅಲ್ಲ 180 ಡಿಗ್ರಿಗಳವರೆಗೆ ತಿರುಗಬಲ್ಲ ರಿವಾಲ್ವಿಂಗ್ ಕುರ್ಚಿಯನ್ನು ಹೊಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top