
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ ತಾಂಜೇನಿಯಾದ ರಕ್ಷಣಾ ಮತ್ತು ರಾಷ್ಟ್ರೀಯ ಸೇವಾ ಸಚಿವ ಡಾ. ಸ್ಟೆರ್ಗೊಮೆನಾ ಲಾರೆನ್ಸ್ ಟ್ಯಾಕ್ಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಹಕಾರವನ್ನು ಇಬ್ಬರೂ ಸಚಿವರು ಪರಿಶೀಲಿಸಿದ್ದಾರೆ.
ವರದಿಗಳ ಪ್ರಕಾರ, ಭಾರತಕ್ಕೆ ಬಂದಿಳಿದ ತಾಂಜೇನಿಯಾದ ರಕ್ಷಣಾ ಸಚಿವರಿಗೆ ಗಾರ್ಡ್ ಆಫ್ ಹಾನರ್ ನೀಡಿ ಗೌರವಿಸಲಾಗಿದೆ.
ದ್ವಿಪಕ್ಷೀಯ ಮಾತುಕತೆಗಳ ಕುರಿತು ಕೇಂದ್ರ ರಕ್ಷಣಾ ಸಚಿವರು ಟ್ವಿಟ್ ಮಾಡಿದ್ದು, “ತಾಂಝೇನಿಯಾದ ರಕ್ಷಣಾ ಸಚಿವ ಡಾ. ಸ್ಟೆರ್ಗೊಮಿನಾ ಲಾರೆನ್ಸ್ ಟ್ಯಾಕ್ಸ್ ಅವರೊಂದಿಗೆ ನವದೆಹಲಿಯಲ್ಲಿ ನಡೆದ ಫಲಪ್ರದ ಸಭೆಯಲ್ಲಿ ಭಾರತ ಮತ್ತು ತಾಂಜಾನಿಯಾ ರಕ್ಷಣಾ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಲಾಗಿದೆ. ಭಾರತ ಮತ್ತು ತಾಂಜಾನಿಯಾ ಒಂದೇ ಬಾಹ್ಯಾಕಾಶ ಕಾರ್ಯತಂತ್ರವನ್ನು ಹಂಚಿಕೊಂಡಿವೆ. ಭಾರತವು ತಾಂಜಾನಿಯಾವನ್ನು ಪಶ್ಚಿಮ ಹಿಂದೂ ಮಹಾಸಾಗರದ ಪ್ರಮುಖ ಪಾಲುದಾರ ಎಂದು ಪರಿಗಣಿಸುತ್ತದೆ” ಎಂದಿದ್ದಾರೆ.
Reviewed the full range of India-Tanzania defence ties during the fruitful meeting with the Tanzanian Defence Minister, Dr. Stergomena Lawrence Tax in New Delhi. India & Tanzania share the same strategic space. India considers Tanzania as a major Western Indian Ocean Player. pic.twitter.com/AKLcBQXJNq
— Rajnath Singh (@rajnathsingh) August 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


