ಟೋಕಿಯೊ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ತಿಂಗಳು ಜಪಾನ್ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಯೋಜಿಸಿದ್ದಾರೆ ಎಂದು ಜಪಾನ್ ಮಾಧ್ಯಮಗಳು ಇಂದು ವರದಿ ಮಾಡಿವೆ.
ಜಪಾನ್ ಸರ್ಕಾರವು ಸೆಪ್ಟೆಂಬರ್ 27 ರಂದು ಅಬೆಯ ಅಂತ್ಯಕ್ರಿಯೆಯನ್ನು ನಿಗದಿಪಡಿಸಿದೆ. ಸಮಾರಂಭವು ಟೋಕಿಯೊದ ಕಿಟಾನೋಮರು ರಾಷ್ಟ್ರೀಯ ಉದ್ಯಾನದಲ್ಲಿರುವ ನಿಪ್ಪಾನ್ ಬುಡೋಕನ್ ಅರೇನಾದಲ್ಲಿ ನಡೆಯಲಿದೆ.
ಈ ಅಧಿಕೃತ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ. ಅಲ್ಲದೇ ಮೋದಿ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಜಪಾನ್ ಭಾರತದ ಪ್ರಮುಖ ಮಿತ್ರರಾಷ್ಟ್ರಗಳಲ್ಲಿ ಒಂದಾಗಿದೆ. ಮೋದಿ ಮತ್ತು ಅಬೆ ಅಧಿಕಾರಾವಧಿಯಲ್ಲಿ ಮತ್ತು ನಂತರವೂ ಸ್ನೇಹ ಸಂಬಂಧಗಳನ್ನು ಉಳಿಸಿಕೊಂಡಿದ್ದರು.
2018 ರಲ್ಲಿ ಪಿಎಂ ಮೋದಿಯವರ ಜಪಾನ್ಗೆ ಅಧಿಕೃತ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅಬೆ ಅವರು ಮೋದಿಯನ್ನು ಯಮನಾಶಿ ಪ್ರಿಫೆಕ್ಚರ್ನಲ್ಲಿರುವ ತಮ್ಮ ಕುಟುಂಬದ ಮನೆಗೆ ಆಹ್ವಾನಿಸಿದರು, ಈ ಕ್ರಮವು ಉಭಯ ನಾಯಕರ ನಡುವೆ ವಿಶೇಣ ಬಾಂಧವ್ಯವನ್ನು ಸೂಚಿಸುತ್ತದೆ.
ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ಗೆ ಭೇಟಿ ನೀಡಿದ ಸಂದರ್ಭದಲ್ಲೂ ಮೋದಿ ಅಬೆ ಅವರನ್ನು ಭೇಟಿಯಾಗಿದ್ದರು. ಆಗ ಅಬೆ ಅಬೆ ಪ್ರಧಾನಿ ಹುದ್ದೆಯಿಂದ ಕೆಳಗಿಳಿದು ಸುಮಾರು ಎರಡು ವರ್ಷಗಳಾಗಿತ್ತು.
ಜುಲೈ 8 ರಂದು ಜಪಾನಿನ ನಾರಾ ನಗರದಲ್ಲಿ ಪ್ರಚಾರ ಭಾಷಣದ ವೇಳೆ ಅಬೆ ಮೇಲೆ ವ್ಯಕ್ತಿಯೋರ್ವ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.