ನವದೆಹಲಿ: ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗಾಗಿ ಒಂದು ಬಾರಿ ನೋಂದಣಿ (One Time Registration) ಸೌಲಭ್ಯವನ್ನು ಪ್ರಾರಂಭಿಸಿದೆ. ಹೀಗಾಗಿ ವಿವಿಧ ನೇಮಕಾತಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿದಾರರು ಮೂಲ ವಿವರಗಳನ್ನು ಪದೇ ಪದೇ ಭರ್ತಿ ಮಾಡುವ ಅಗತ್ಯ ಬೀಳುವುದಿಲ್ಲ.
“ಪರೀಕ್ಷೆಗಳ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ದೃಷ್ಟಿಯಿಂದ, ಯುಪಿಎಸ್ಸಿ ವೆಬ್ಸೈಟ್ upsc.gov.in ಮತ್ತು upsconline ನಲ್ಲಿ 24×4 ಆಧಾರದಲ್ಲಿ ‘ಒಂದು ಬಾರಿ ನೋಂದಣಿ’ (OTR) ಪ್ಲಾಟ್ಫಾರ್ಮ್ ಅನ್ನು ಪ್ರಾರಂಭಿಸಲಾಗಿದೆ” ಎಂದು UPSC ಹೇಳಿಕೆಯಲ್ಲಿ ತಿಳಿಸಿದೆ.
ಒನ್ ಟೈಮ್ ರಿಜಿಸ್ಟ್ರೇಶನ್ ಅಭ್ಯರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿದೆ. ಇದು ಯುಪಿಎಸ್ಸಿ ನಡೆಸುವ ಯಾವುದೇ ಪರೀಕ್ಷೆಗೆ ಅವರ ಮೂಲ ವೈಯಕ್ತಿಕ ವಿವರಗಳನ್ನು ಮತ್ತೆ ಮತ್ತೆ ತುಂಬುವ ಅನಿವಾರ್ಯತೆಯನ್ನು ತಪ್ಪಿಸುತ್ತದೆ. ಅಲ್ಲದೇ ಅವರ ಮೂಲ ವೈಯಕ್ತಿಕ ಮಾಹಿತಿಯಲ್ಲಿ ಯಾವುದೇ ತಪ್ಪು ಇರುವ ಸಾಧ್ಯತೆಯನ್ನು ನಿವಾರಿಸುತ್ತದೆ. ಯಾಕೆಂದರೆ ಇಲ್ಲಿ ವಿವರಗಳನ್ನು ಅಭ್ಯರ್ಥಿಗಳು ಸ್ವತಃ ಮೌಲ್ಯೀಕರಿಸುತ್ತಾರೆ ಎಂದು ಯುಪಿಎಸ್ಸಿ ಹೇಳಿದೆ.
“ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ನ ಯಾವುದೇ ಭವಿಷ್ಯದ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಆಕಾಂಕ್ಷಿಗಳು, ಅದರಲ್ಲಿ ಸೂಚಿಸಲಾದ ತಮ್ಮ ಮೂಲಭೂತ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ OTR ಪ್ಲಾಟ್ಫಾರ್ಮ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಮ್ಮೆ ಆಕಾಂಕ್ಷಿಗಳ ನೋಂದಣಿ ಪೂರ್ಣಗೊಂಡ ನಂತರ, ಮಾಹಿತಿಯನ್ನು ಆಯೋಗದ ಸರ್ವರ್ಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತದೆ” ಎಂದು UPSC ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.