ಬೆಳ್ತಂಗಡಿ : ನಮ್ಮ ಮುಂದಿನ ಗುರಿ ಪಂಜಾಬ್ ರಾಜ್ಯ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.ಧರ್ಮಸ್ಥಳದಲ್ಲಿ ಶ್ರೀ ಸನ್ನಿಧಿ ಅತಿಥಿ ಗೃಹದಲ್ಲಿ ಬುಧವಾರ ಅವರು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದರು.
ಈಗಾಗಲೇ ದೆಹಲಿ ಆಮ್ ಅದ್ಮಿ ಪಕ್ಷದ ಕೈಯಲ್ಲಿದೆ. ನಮ್ಮ ಮುಂದಿನ ಹೆಜ್ಜೆ ಪಂಚಾಬ್ ರಾಜ್ಯದ ಕಡೆಗೆ. ಅಲ್ಲಿ ಒಂದು ತಿಂಗಳೊಳಗೆ ರಾಜ್ಯದ ಪ್ರತೀ ಬೂತ್ನಲ್ಲಿ ಐದೈದು ಕಾರ್ಯಕರ್ತರನ್ನು ತಯಾರು ಮಾಡಲಾಗುವುದು. ಇಲ್ಲಿ ಯುವಕರ ಸಂಘಟನೆ ಚುರುಕಾಗಿದೆ.
ಇನ್ನುಳಿದ ರಾಜ್ಯಗಳಲ್ಲೂ ಇದೇ ಪ್ರಯತ್ನ ಮುಂದುವರಿಸಲಾಗುವುದು. ಇದೇ ಅಕ್ಟೋಬರ್ ತಿಂಗಳೊಳಗೆ ಲೋಕಪಾಲ್ ಮಸೂದೆ ಜಾರಿಗೆ ತರಲಾಗುವುದು.ಸರ್ಕಾರದ ವಿವಿಧ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವಾಗ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರಕಾರ ಜನರನ್ನು ನಿರಾಶೆಗೊಳಿಸಿದೆ. ಅದು ಅವರ ಧರ್ಮ.
ಕೆಲಸ ಮಾಡಿ ತೋರಿಸಿದ್ದು ನಾವು. ಇದು ನಮ್ಮ ಧರ್ಮ. ಹೀಗಾಗಿ ಮತದಾರರು ಎರಡನೇ ಬಾರಿಗೆ ನಮ್ಮನ್ನು ಗೆಲ್ಲಿಸಿದ್ದಾರೆ. ಕೃಷಿಗಾಗಿ, ಕೃಷಿಕರಿಗಾಗಿ ವಿಶೇಷ ಯೋಜನೆ ಮಾಡಿದ್ದೇವೆ. ಎಲ್ಲಾ ರಾಜ್ಯದ ರೈತರನ್ನು ಬೇರೆ ಬೇರೆಯಾಗಿ ಸೇರಿಸಿ ಮಾತುಕತೆ ನಡೆಸಬೇಕು ಎಂದರು. ರಬ್ಬರ್ ಬೆಳೆಯ ಬದಲು ಆರ್ಯುವೇದ ಸಸ್ಯಗಳನ್ನು ಬೆಳೆಸಿದಲ್ಲಿ ಪ್ರಯೋಜನವಾಗಬಲ್ಲುದು ಎಂದರು. ದೆಹಲಿ ಸಂಪೂರ್ಣ ರಾಜ್ಯ ಸ್ಥಾನ ಮಾನಕ್ಕೆ ನರೇಂದ್ರ ಮೋದಿ ಅಡ್ಡಗಾಲು ಇಡುತ್ತಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.