ನವದೆಹಲಿ: ಇಂದು ದೇಶಾದ್ಯಂತ ರಕ್ಷಾ ಬಂಧನವನ್ನು ಅತ್ಯಂತ ಸಡಗರ ಸಂಭ್ರದಿಂದ ಆಚರಣೆ ಮಾಡಲಾಗುತ್ತಿದೆ. ಎಂದಿನಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನೇಕರು ರಾಖಿ ಕಟ್ಟಿ ಸಂಭ್ರಮಸಿದ್ದಾರೆ.
ಪ್ರಧಾನಿ ಮೋದಿ ಇಂದು ತಮ್ಮ ನಿವಾಸದಲ್ಲಿ ರಕ್ಷಾ ಬಂಧನವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಅವರ ಕಾರ್ಯಾಲಯದ ಸಿಬ್ಬಂದಿಗಳ ಪುಟಾಣಿ ಹೆಣ್ಣು ಮಕ್ಕಳು ಮೋದಿ ಕೈಗೆ ರಾಖಿ ಕಟ್ಟಿದರು.
ಪ್ರಧಾನಮಂತ್ರಿಯವರ ಮನೆಯಲ್ಲಿ ನಡೆದ ಈ ವಿಶೇಷ ರಕ್ಷಾ ಬಂಧನ ಆಚರಣೆಯಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದ ಸ್ವಚ್ಛತಾ ಕಾರ್ಮಿಕರು, ಗಾರ್ಡನಿಂಗ್ ಮಾಡುವವರು, ಚಾಲಕರು ಸೇರಿದಂತೆ ಇತರ ಸಿಬ್ಬಂದಿಗಳ ಹೆಣ್ಣುಮಕ್ಕಳು ಮೋದಿ ಕೈಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ಅಧಿಕಾರಿಗಳು ಈ ಸಂಭ್ರಮಾಚರಣೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಮಕ್ಕಳೊಂದಿಗೆ ಪ್ರಧಾನ ಮಂತ್ರಿಯವರ ಸಂವಾದದ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ರಕ್ಷಾ ಬಂಧನದ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದರು. “ರಕ್ಷಾ ಬಂಧನದ ವಿಶೇಷ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯಗಳು” ಎಂದು ಅವರು ಟ್ವೀಟ್ ಮಾಡಿದ್ದಾರೆ.
#WATCH | Prime Minister Narendra Modi celebrated #RakshaBandhan with young girls today at his residence in Delhi.
This was a special Rakshabandhan as these girls were the daughters of sweepers, peons, gardeners, drivers, etc working at PMO.
(Video Source: PMO) pic.twitter.com/eSvd6gsgHb
— ANI (@ANI) August 11, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.