News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅದ್ಧೂರಿ ಮುಕ್ತಾಯ ಕಂಡ ಕಾಮನ್ವೆಲ್ತ್‌ ಗೇಮ್ಸ್:‌ ಭಾರತಕ್ಕೆ ಒಟ್ಟು 61 ಪದಕ

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರೋಪ ಸಮಾರಂಭದಲ್ಲಿ ಕಾಮನ್‌ವೆಲ್ತ್ ಗೇಮ್ಸ್ 2022 ಸೋಮವಾರ ಮುಕ್ತಾಯಗೊಂಡಿತು. ಕ್ರೀಡಾಕೂಟದ ಧ್ವಜವನ್ನು ಕೆಳಗಿಳಿಸಿ, ಅದನ್ನು 2026 ರಲ್ಲಿ ಕಾಮನ್ವೆಲ್ತ್‌ನ ಮುಂದಿನ ಆವೃತ್ತಿಯನ್ನು ಆಯೋಜಿಸುವ ಆಸ್ಟ್ರೇಲಿಯಾದ ವಿಕ್ಟೋರಿಯಾಕ್ಕೆ ಹಸ್ತಾಂತರಿಸಲಾಯಿತು.

ಸೋಲಿಹುಲ್ ಬ್ಯಾಂಡ್ ಓಷನ್ ಕಲರ್ ಸೀನ್‌ನ ಪ್ರದರ್ಶನದೊಂದಿಗೆ ಮುಕ್ತಾಯ ಸಮಾರಂಭವು ಪ್ರಾರಂಭವಾಯಿತು. ಇದರ ನಂತರ ಬರ್ಮಿಂಗ್ಹ್ಯಾಮ್‌ನ ಬ್ಯಾಂಡ್ ಡೆಕ್ಸಿಸ್ ಮಿಡ್‌ನೈಟ್ ರನ್ನರ್ಸ್‌ನಿಂದ ಸಂಗೀತ ಪ್ರದರ್ಶನ ನಡೆಯಿತು. ಸಾರ್ವಕಾಲಿಕ ದೊಡ್ಡ ಬ್ಯಾಂಡ್‌ಗಳಲ್ಲಿ ಒಂದಾದ UB40 ಈವೆಂಟ್‌ಗೆ ಮತ್ತಷ್ಟು ಮೆರುಗು ನೀಡಿತು. ಮಿಡ್‌ಲ್ಯಾಂಡ್ಸ್ ಪ್ರದೇಶದ ಇತರ ಸಂಗೀತಗಾರರು ಮತ್ತು ಬ್ಯಾಂಡ್‌ಗಳು ಕೂಡ ತಮ್ಮ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸಿದವು.

ಒಟ್ಟು 11 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 72 ದೇಶಗಳ 4,500 ಕ್ರೀಡಾಳುಗಳು ಭಾಗವಹಿಸಿದ್ದರು.

ಈ ಬಾರಿ ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನ ಪಡೆದುಕೊಂಡಿದೆ. ನಂತರ ಇಂಗ್ಲೆಂಡ್‌ ಮತ್ತು ಕೆನಡಾ ಇದೆ. ನಾಲ್ಕನೇ ಸ್ಥಾನದಲ್ಲಿ ಭಾರತ ಕಾಣಿಸಿಕೊಂಡಿದೆ.

ಭಾರತೀಯರು ಒಟ್ಟು 61 ಪದಕಗಳನ್ನು ಜಯಿಸಿದ್ದು, ಇದರಲ್ಲಿ 22 ಬಂಗಾರ, 16 ಬೆಳ್ಳಿ ಮತ್ತು 23 ಕಂಚು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top