News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮುಂಬೈನಲ್ಲಿ ದಾವೂದ್ ಗ್ಯಾಂಗ್‌ನ ಸದಸ್ಯನನ್ನು ಬಂಧಿಸಿದ ಎನ್‌ಐಎ

ನವದೆಹಲಿ: ದಾವೂದ್ ಗ್ಯಾಂಗ್‌ನ ಸಕ್ರಿಯ ಸದಸ್ಯನನ್ನು ಮುಂಬೈನಲ್ಲಿ ನಿನ್ನೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.

ಬಂಧಿತ ಆರೋಪಿ ಕಳ್ಳಸಾಗಣೆ, ನಾರ್ಕೋ-ಭಯೋತ್ಪಾದನೆ, ಹಣಕಾಸು ವಂಚನೆ, ನಕಲಿ ಕರೆನ್ಸಿ ನೋಟುಗಳ ಚಲಾವಣೆ, ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿಸಂಗ್ರಹಣೆ ಮತ್ತು ಎಲ್ಇಟಿ, ಜೆಎಂ ಮತ್ತು ಅಲ್ ಖೈದಾದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಆರೋಪಿಯನ್ನು ಮೊಹಮ್ಮದ್ ಇಕ್ಬಾಲ್ ಖುರೇಷಿ ಅಲಿಯಾಸ್ ಸಲೀಂ ಫ್ರೂಟ್ ಎಂದು ಗುರುತಿಸಲಾಗಿದೆ. ಈತ ಫ್ರೂಟ್ ಡಿ ಕಂಪನಿಯ ನಿಕಟವರ್ತಿ. ಡಿ ಕಂಪನಿಯ ಚಟುವಟಿಕೆಗಳಿಗೆ ಭಯೋತ್ಪಾದಕ ನಿಧಿ ಸಂಗ್ರಹಿಸಲು ಆಸ್ತಿ ವ್ಯವಹಾರ ಮತ್ತು ವಿವಾದ ಇತ್ಯರ್ಥದ ಮೂಲಕ ಛೋಟಾ ಶಕೀಲ್ ಹೆಸರಿನಲ್ಲಿ ಭಾರಿ ಮೊತ್ತದ ಹಣವನ್ನು ಸುಲಿಗೆ ಮಾಡುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ ಎನ್ನಲಾಗಿದೆ.

ಪ್ರಕರಣದಲ್ಲಿ ಈ ಹಿಂದೆ ಮೇ 12 ರಂದು ಇಬ್ಬರನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top