News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೆಪೋ ದರವನ್ನು ಶೇ 0.50ರಷ್ಟು ಹೆಚ್ಚಳ‌ ಮಾಡಿದ ಆರ್‌ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಶೇ 0.50ರಷ್ಟು ಹೆಚ್ಚಳ‌ ಮಾಡಿದೆ. ಈ ಮೂಲಕ ಪ್ರಸ್ತುತ ರೆಪೋ ದರ ಶೇ.5.4ಕ್ಕೆ ಏರಿಕೆಯಾಗಿದೆ.

ಸತತ ಮೂರನೇ ಬಾರಿಗೆ ರೆಪೋ ದರವನ್ನು ಆರ್‌ಬಿಐ ಹೆಚ್ಚಳ ಮಾಡಿದೆ. ಮೇ ತಿಂಗಳಲ್ಲಿ ಶೇ.0.4 ಮತ್ತು ಜೂನ್ ತಿಂಗಳಲ್ಲಿ ಶೇ.0.05 ರೆಪೋ ದರವನ್ನು ಹೆಚ್ಚಳ ಮಾಡಲಾಗಿತ್ತು.

ದೇಶದ ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿದರವೇ ರೆಪೋ ದರ.‌ ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡಿದರೆ ಬ್ಯಾಂಕುಗಳು ಕೂಡ ತನ್ನ ಗ್ರಾಹಕರ ಸಾಲದ ಮೇಲಿನ ಬಡ್ಡಿ ದರವನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಮುಂಬೈನಲ್ಲಿ ಇಂದು ಹಣಕಾಸು ನೀತಿ ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು, ಪರಿಷ್ಕೃತ ರೆಪೋ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ರೆಪೋ ದರ ಹೆಚ್ಚಳಕ್ಕೆ ಶಕ್ತಿಕಾಂತ್ ದಾಸ್ ನೇತೃತ್ವದ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು ಸರ್ವಾನುಮತದಿಂದ ಅನುಮೋದನೆ ನೀಡಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top