News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತವು ವಿಶ್ವದ 2ನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆ: ಕೇಂದ್ರ ಸಚಿವ

ನವದೆಹಲಿ: 117 ಕೋಟಿ ಗ್ರಾಹಕರನ್ನು ಹೊಂದಿರುವ ಭಾರತವು ವಿಶ್ವದ 2ನೇ ಅತಿದೊಡ್ಡ ಟೆಲಿಕಾಂ ಮಾರುಕಟ್ಟೆಯಾಗಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಇಂದು ಹೇಳಿದ್ದಾರೆ.

2ಜಿ ಬಗ್ಗೆ ಇದ್ದ ಟೆಲಿಕಾಂ ಡಿಸ್ಕರ್ಸ್ ಅನ್ನು 5ಜಿ ಮತ್ತು 6ಜಿಗೆ ಕೊಂಡೊಯ್ಯಲಾಗಿದೆ ಎಂದರು.

ವೈಷ್ಣವ್ ಅವರು ಇಂದು ಮುಂಬೈನಲ್ಲಿ “5G ಕಾರ್ಯಾಚರಣೆಗಳು ಮತ್ತು ಟೆಲಿಕಾಂ ಸುಧಾರಣೆಗಳಲ್ಲಿ ಹೂಡಿಕೆಯ ಅವಕಾಶ” ಕುರಿತು ಟೆಲಿಕಾಂ ಹೂಡಿಕೆದಾರರ ರೌಂಡ್‌ಟೇಬಲ್‌ನ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಭಾರತದ ಟೆಲಿಕಾಂ ನಿಯಂತ್ರಣವನ್ನು ಜಾಗತಿಕ ಮಾನದಂಡವನ್ನಾಗಿ ಮಾಡಲು ಪ್ರಧಾನಿ ಸಚಿವಾಲಯಕ್ಕೆ ಸ್ಪಷ್ಟ ಗುರಿಯನ್ನು ನೀಡಿದ್ದಾರೆ,  ಪ್ರಪಂಚದಾದ್ಯಂತದ ಜನರು ಬಂದು ಭಾರತದ ಟೆಲಿಕಾಂ ನಿಯಂತ್ರಣವನ್ನು ಅಳವಡಿಸಬೇಕು ಎಂಬುದು ನಮ್ಮ ಉದ್ದೇಶ ಎಂದಿದ್ದಾರೆ

5ಜಿ ತರಂಗಾಂತರ ಹರಾಜಿಗೆ ಉದ್ಯಮದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. 5G ಸ್ಪೆಕ್ಟ್ರಮ್‌ನ ಬೆಲೆಗಳನ್ನು ಕಡಿಮೆ ಮಾಡಿರುವುದರಿಂದ ಹೆಚ್ಚಿನವರು ಮುಂದೆ ಬರುತ್ತಿದ್ದಾರೆ ಎಂದು ಅವರು ಹೇಳಿದರು.

ಟೆಲಿಕಾಂ ಕ್ಷೇತ್ರಕ್ಕೆ ಹೊಸ ಕಾನೂನು ಚೌಕಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವೈಷ್ಣವ್ ಮಾಹಿತಿ ನೀಡಿದರು. ಆಗಸ್ಟ್ 2023 ರೊಳಗೆ ಹೊಸ ಕಾನೂನು ರಚನೆಯನ್ನು ಹೊಂದುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top