News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಎವೆರಿಥಿಂಗ್ ಎಬೌಟ್ ವಾಟರ್ ಎಕ್ಸ್‌ಪೋʼಗಾಗಿ ಭಾರತ-ಇಸ್ರೇಲ್ ಪಾಲುದಾರಿಕೆ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಗಸ್ಟ್ 4-6 ರಿಂದ ನಡೆಯಲಿರುವ 17 ನೇ ʼಎವೆರಿಥಿಂಗ್ ಎಬೌಟ್ ವಾಟರ್ ಎಕ್ಸ್‌ಪೋ 2022ʼ ಗಾಗಿ ಭಾರತ ಮತ್ತು ಇಸ್ರೇಲ್ ಪಾಲುದಾರರಾಗಲು ಸಿದ್ಧವಾಗಿವೆ ಎಂದು ನವದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.

ಇದು ಜಲ ಕ್ಷೇತ್ರದಲ್ಲಿ ಇಸ್ರೇಲ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ.

ಇಸ್ರೇಲ್‌ನ ನಾಲ್ವರು ಉನ್ನತ ಮಟ್ಟದ ಜಲ ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೀರಿನ ನಿರ್ವಹಣೆ, ನೀತಿ ನಿಯಮಗಳು, ನೀರಿನ ತಂತ್ರಜ್ಞಾನಗಳು, ಆರ್ & ಡಿ ಅನುಷ್ಠಾನದ ಬಗ್ಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ.

“ಇಂದು ಇಸ್ರೇಲ್ ತನ್ನ ತ್ಯಾಜ್ಯನೀರಿನ ಶೇಕಡಾ 90 ರಷ್ಟು ಮರುಬಳಕೆ ಮಾಡುತ್ತಿದೆ. ಇದು ತ್ಯಾಜ್ಯನೀರಿನ ಮರುಬಳಕೆಯಲ್ಲಿ ಅದು ಜಾಗತಿಕ ನಾಯಕನಾಗಿ ಅಗ್ರಸ್ಥಾನದಲ್ಲಿದೆ. ಉತ್ತಮ ನಿರ್ವಹಣೆ, ಹೈಟೆಕ್ ಅಭಿವೃದ್ಧಿ ಮತ್ತು ಸಾರ್ವಜನಿಕ ಶಿಕ್ಷಣವನ್ನು ಒಳಗೊಂಡಿರುವ ನೀರಿನ ಬಳಕೆಗೆ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ  ಒಣ ರಾಷ್ಟ್ರವಾದ ಇಸ್ರೇಲ್‌ ಇಂದು ನೀರಿನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ” ಎಂದು ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈವೆಂಟ್‌ನ ಮತ್ತೊಂದು ಪ್ರಮುಖ ಅಂಶವೆಂದರೆ 8 ಪ್ರಮುಖ ಇಸ್ರೇಲಿ ನೀರಿನ ಕಂಪನಿಗಳ ಭಾಗವಹಿಸುವಿಕೆ. ಇವು ಇಸ್ರೇಲ್‌ ಪೆವಿಲಿಯನ್‌ನಲ್ಲಿ ಅತ್ಯಾಧುನಿಕ ನೀರಿನ ತಂತ್ರಜ್ಞಾನಗಳನ್ನು ಪ್ರದರ್ಶಿಸುತ್ತದೆ.

ಬಿಡುಗಡೆಯ ಪ್ರಕಾರ, ಈ ಭಾಗವಹಿಸುವ ಕಂಪನಿಗಳು ನೀರಿನ ವಿತರಣೆ ಮತ್ತು ನಿರ್ವಹಣೆ, ಶೋಧನೆ, ಸೋರಿಕೆ ಪತ್ತೆ, ತ್ಯಾಜ್ಯನೀರಿನ ಸಂಸ್ಕರಣೆ, ಡೆಸಿಲೀಕರಣ ಮತ್ತು ನೀರಿನ ಭದ್ರತೆಗೆ ಸಂಬಂಧಿಸಿದ ಪರಿಹಾರಗಳನ್ನು ಪರಿಚಯಿಸುತ್ತವೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top