News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿಜಿಟಲ್‌ ಪಾವತಿ, ಸ್ಟಾರ್ಟ್‌ಅಪ್:‌ ಸಹಕಾರ ವೃದ್ಧಿಗೆ ಭಾರತ-ಉಜ್ಬೇಕಿಸ್ಥಾನ ಉತ್ಸುಕ

ನವದೆಹಲಿ: ಭಾರತ-ಉಜ್ಬೇಕಿಸ್ಥಾನ್ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿವೆ.  ಡಿಜಿಟಲ್ ಪಾವತಿಗಳು, ಸ್ಟಾರ್ಟ್-ಅಪ್‌ಗಳು, ಕೃಷಿ ಮತ್ತು ಫಾರ್ಮಾ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಉತ್ಸುಕವಾಗಿವೆ.

ಉಭಯ ದೇಶಗಳು ಈ ವರ್ಷ ತಮ್ಮ ರಾಜತಾಂತ್ರಿಕ ಸಂಬಂಧಗಳ ಮೂವತ್ತನೇ ವರ್ಷವನ್ನು ಆಚರಿಸುತ್ತಿವೆ.

ದ್ವಿಪಕ್ಷೀಯ ವ್ಯಾಪಾರದಲ್ಲಿ ಮಹತ್ವಾಕಾಂಕ್ಷೆಯ ಬೆಳವಣಿಗೆಯ ಅಗತ್ಯವನ್ನು ಉಭಯ ದೇಶಗಳು ಕಂಡುಕೊಂಡಿವೆ. ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಆರ್ಥಿಕ ಅನಿಶ್ಚಿತತೆಯ ನಡುವೆ ಸಮಗ್ರ ವಿಸ್ತೃತ ಪಾಲುದಾರಿಕೆಯನ್ನು ಹೊಂದಲು ಬಯಸುತ್ತಿವೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಗೆ ಭಾರತ-ಉಜ್ಬೇಕಿಸ್ಥಾನ್ ಸಂಬಂಧಗಳು ಪ್ರಮುಖವಾಗಿವೆ.

‌ಭಾರತ-ಉಜ್ಬೇಕಿಸ್ಥಾನ್ ಅಂತರ ಸರ್ಕಾರಿ ಆಯೋಗವನ್ನು ಗುರುವಾರ  ಉದ್ದೇಶಿಸಿ ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಡಿಜಿಟಲ್ ಪಾವತಿಗಳು, ಬಾಹ್ಯಾಕಾಶ ಸಹಕಾರ, ಕೃಷಿ ಮತ್ತು ಡೈರಿ, ಫಾರ್ಮಾ, ರತ್ನಗಳು ಮತ್ತು ಆಭರಣಗಳು, ಸೂಕ್ಷ್ಮ-ಸಣ್ಣ-ಮಧ್ಯಮ ಉದ್ಯಮಗಳನ್ನು ಒಳಗೊಂಡಿರುವ ಅಂತರ-ಪ್ರಾದೇಶಿಕ ಸಹಕಾರದ ಏಳು ಉದಯೋನ್ಮುಖ ಸಹಕಾರ ಕ್ಷೇತ್ರಗಳನ್ನು ಒತ್ತಿಹೇಳಿದ್ದಾರೆ.

IGC ಯ ಅಧಿವೇಶನಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿರುವ ಉಜ್ಬೇಕಿಸ್ತಾನ್‌ನ ಉಪಪ್ರಧಾನಿ ಮತ್ತು ಹೂಡಿಕೆ ಮತ್ತು ವಿದೇಶಿ ವ್ಯಾಪಾರ ಸಚಿವ ಜಮ್‌ಶಿದ್ ಖೋಡ್ಜೇವ್ ಅವರು ಕೃಷಿ, ನಾವೀನ್ಯತೆ, ಸಂಪರ್ಕ, ವಿಜ್ಞಾನ ಮತ್ತು ತಂತ್ರಜ್ಞಾನ, ಜವಳಿ ಮತ್ತು ಚರ್ಮದ ಮೇಲೆ ಸಂಬಂಧಗಳನ್ನು ಬೆಳೆಸುವ ನಿಟ್ಟಿನಲ್ಲಿ ಗಮನಹರಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top