News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಡಿ.1ರಿಂದ ತಂಬಾಕು ಉತ್ಪನ್ನಗಳಲ್ಲಿ ಇರಲಿದೆ ಹೊಸ ಚಿತ್ರ

ನವದೆಹಲಿ: ಡಿಸೆಂಬರ್ 1ರಿಂದ ದೇಶದಲ್ಲೇ ತಯಾರಿಸಿದ, ಆಮದು ಮಾಡಿದ ಅಥವಾ ಪ್ಯಾಕ್ ಮಾಡಿದ ತಂಬಾಕು ಉತ್ಪನ್ನಗಳು ಮೇಲೆ ಹೊಸ ಚಿತ್ರಗಳು ಇರಲಿವೆ. “ತಂಬಾಕು ಅತೀವ ನೋವಿನ ಸಾವಿಗೆ ಕಾರಣವಾಗುತ್ತದೆ” ಎಂಬ ಆರೋಗ್ಯ ಸಂಬಂಧಿತ ಎಚ್ಚರಿಕೆಯೊಂದಿಗೆ ಹೊಸ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಈ ಹೊಸ ಚಿತ್ರವು ಡಿಸೆಂಬರ್ 1 ರಿಂದ ಪ್ರಾರಂಭವಾಗಿ ನಂತರ ಒಂದು ವರ್ಷದ ಅವಧಿಗೆ ಮಾನ್ಯವಾಗಿರುತ್ತದೆ.

ಅಲ್ಲದೇ ಸಚಿವಾಲಯವು ಸೂಚಿಸಿರುವ ಹೊಸ ಆರೋಗ್ಯ ಎಚ್ಚರಿಕೆಗಳ ಪ್ರಕಾರ, ಡಿಸೆಂಬರ್ 1, 2023 ರಿಂದ ದೇಶದಲ್ಲಿ ತಯಾರಿಸಲಾದ, ಆಮದು ಮಾಡಿದ ಅಥವಾ ಪ್ಯಾಕ್ ಮಾಡಲಾದ ತಂಬಾಕು ಉತ್ಪನ್ನಗಳ ಮೇಲೆ “ತಂಬಾಕು ಬಳಕೆದಾರರು ಕಿರಿಯ ವಯಸ್ಸಿನಲ್ಲೇ ಸಾಯುತ್ತಾರೆ” ಎಂಬ  ಆರೋಗ್ಯ ಎಚ್ಚರಿಕೆಯೊಂದಿಗೆ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ.

2022 ರ ಜುಲೈ 21 ರಂದು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು, 2008 ರ ತಿದ್ದುಪಡಿಯ ಮೂಲಕ ಸಚಿವಾಲಯವು ಹೊಸ ಆರೋಗ್ಯ ಎಚ್ಚರಿಕೆಗಳನ್ನು ತರಲು ಸೂಚಿಸಿದೆ.

19 ಭಾಷೆಗಳಲ್ಲಿ ಅಧಿಸೂಚನೆಯು http://www.mohfw.gov.in”www.mohfw.gov.in ಮತ್ತು http://ntcp.nhp.gov.in”ntcp.nhp.gov.in ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ.

ಸಿಗರೇಟ್ ಅಥವಾ ಯಾವುದೇ ತಂಬಾಕು ಉತ್ಪನ್ನಗಳ ತಯಾರಿಕೆ, ಉತ್ಪಾದನೆ, ಪೂರೈಕೆ, ಆಮದು ಅಥವಾ ವಿತರಣೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿರುವ ಯಾವುದೇ ವ್ಯಕ್ತಿ ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೇಜ್‌ಗಳು ಸೂಚಿಸಿದಂತೆ ನಿರ್ದಿಷ್ಟಪಡಿಸಿದ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top