News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಾತಂತ್ರ್ಯ ವೀರರಿಗೆ ಡಿಜಿಟಲ್‌ ಗೌರವಾರ್ಪಣೆಗೆ ಮೋದಿ ಕರೆ

ನವದೆಹಲಿ: ದೆಹಲಿಯ ಸೆಂಟ್ರಲ್ ಪಾರ್ಕ್‌ನಲ್ಲಿ ಸ್ಕೈ ಬೀಮ್ ಲೈಟ್ ಅಳವಡಿಸಲಾಗಿದ್ದು, ಇದನ್ನು ಡಿಜಿಟಲ್‌ ಜ್ಯೋತಿ ಎಂದು ಕರೆಯಲಾಗುತ್ತಿದೆ. ಆನ್‌ಲೈನ್‌ ಮೂಲಕ ಸಲ್ಲಿಸುವ ಪ್ರತಿ ಗೌರವಾರ್ಪಣೆಯು ಡಿಜಿಟಲ್‌ ಜ್ಯೋತಿಯ ಪ್ರಖರತೆಯನ್ನು ಹೆಚ್ಚಿಸುತ್ತದೆ

ಪ್ರತಿ ಗೌರವಾರ್ಪಣೆಯು ಡಿಜಿಟಲ್ ಜ್ಯೋತಿಯ ಪ್ರಖರತೆಯನ್ನು ತೀವ್ರಗೊಳಿಸುತ್ತದೆ. ಈ ವಿಭಿನ್ನ ಪ್ರಯತ್ನದಲ್ಲಿ ಪಾಲ್ಗೊಳ್ಳಿ ಮತ್ತು ಆಜಾದಿ ಕಾ ಅಮೃತ ಮಹೋತ್ಸವವನ್ನು ಬಲಪಡಿಸಿ ಎಂದು ಮೋದಿ ಕರೆ ನೀಡಿದ್ದಾರೆ.

”ದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಸ್ಕೈ ಬೀಮ್ ಲೈಟ್ ಅಳವಡಿಸಲಾಗಿದೆ. ಸಲ್ಲಿಸಿದ ಪ್ರತಿ ಗೌರವವು ಡಿಜಿಟಲ್ ಜ್ಯೋತಿಯ ಪ್ರಕಾಶವನ್ನು ತೀವ್ರಗೊಳಿಸುತ್ತದೆ. ಈ ವಿಶಿಷ್ಟ ಪ್ರಯತ್ನದಲ್ಲಿ ಭಾಗವಹಿಸಿ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಬಲಪಡಿಸಿ” ಎಂದು ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

”ಡಿಜಿಟಲ್ ಜ್ಯೋತಿ” ಭಾರತದ ಸ್ವಾತಂತ್ರ್ಯ ಹೋರಾಟದ ವೀರರಿಗೆ ವಿಶೇಷ ಗೌರವವಾಗಿದೆ, ಇದು ತಂತ್ರಜ್ಞಾನವನ್ನು ಬಳಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆಯ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಳ್ಳಲು ಜನರಿಗೆ ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

ಅವರು ಉಪಕ್ರಮದ ಲಿಂಕ್  digitaltribute.in. ಅನ್ನು ಸಹ ಹಂಚಿಕೊಂಡಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top