ನವದೆಹಲಿ: ಭಾರತ ಎಂದರೆ ಹಲವು ಭಾಷೆಗಳ, ಹಲವು ಸಂಸ್ಕೃತಿಗಳ ಸಂಗಮ. ಒಂದು ರಾಜ್ಯದ ಭಾಷೆಯನ್ನು ಇನ್ನೊಂದು ರಾಜ್ಯದವರು ಗೌರವಿಸುವುದನ್ನು, ಒಬ್ಬರ ಸಂಸ್ಕೃತಿಯನ್ನು ಇನ್ನೊಬ್ಬರು ಪ್ರೀತಿಸುವುದನ್ನೇ ವಿವಿಧತೆಯಲ್ಲಿ ಏಕತೆ ಎಂದು ಕರೆಯಲಾಗುತ್ತದೆ.
ಅರುಣಾಚಲದ ಬಾಲಕಿಯರು ತಮಿಳು ಗೀತೆಯನ್ನು ಹಾಡುವ ಮೂಲಕ ಎಲ್ಲರ ಗಮನ ಸೆಳೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಂದಲೂ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ಭಾರತಿ ಅವರ ತಮಿಳು ದೇಶಭಕ್ತಿ ಗೀತೆಯನ್ನು ಅರುಣಾಚಲ ಸಹೋದರಿಯರು ಹಾಡುವುದನ್ನು ನೋಡಿ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ತಮಿಳಿನಲ್ಲಿ ಟ್ವೀಟ್ ಮಾಡಿರುವ ಮೋದಿ, ” ನೋಡಲು ಸಂತೋಷವಾಗುತ್ತಿದೆ ಮತ್ತು ಹೆಮ್ಮೆ ಎನಿಸುತ್ತಿದೆ, ತಮಿಳಿನಲ್ಲಿ ಹಾಡುವ ಮೂಲಕ ‘ಏಕ್ ಭಾರತ್-ಶ್ರೇಷ್ಠ ಭಾರತ’ದ ಉತ್ಸಾಹವನ್ನು ಹೆಚ್ಚಿಸಿದ್ದಕ್ಕಾಗಿ ಅರುಣಾಚಲ ಪ್ರದೇಶದ ನಮ್ಮ ಯುವ ಶಕ್ತಿಯ ಈ ಹೊಳೆಯುವ ತಾರೆಗಳಿಗೆ ಅಭಿನಂದನೆಗಳು” ಎಂದಿದ್ದಾರೆ.
இதைக் கண்டபோது நான் பெருமகிழ்ச்சியும் உவகையும் கொண்டேன். ஒரே இந்தியா உன்னத இந்தியா கோட்பாட்டை அடுத்த நிலைக்கு எடுத்துச் செல்லும் வகையில் தமிழில் பாடியுள்ள அருணாச்சலப் பிரதேசத்தைச் சேர்ந்த இளைஞர் சக்தியின் நட்சத்திரங்களுக்கு எனது பாராட்டுக்கள். https://t.co/XtRSoYWT1y
— Narendra Modi (@narendramodi) July 20, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.