News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬ್ರಿಟನ್‌ ಪ್ರಧಾನಿ ರೇಸ್‌ನಲ್ಲಿರುವವರ ಸಂಖ್ಯೆ 3ಕ್ಕೆ ಇಳಿಕೆ: ರಿಷಿಗೆ ಅಗ್ರಸ್ಥಾನ

ನವದೆಹಲಿ: ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗುವ ರೇಸ್‌ನಲ್ಲಿ ಇರುವ ಮಾಜಿ ಚಾನ್ಸೆಲರ್ ರಿಷಿ ಸುನಕ್ ನಾಲ್ಕನೇ ಸುತ್ತಿನ ಮತದಾನದಲ್ಲೂ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. ಅವರು ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ 118 ಮತಗಳೊಂದಿಗೆ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚುನಾವಣೆಯಲ್ಲಿ ಸುನಕ್ ನಂತರ ಮಾಜಿ ರಕ್ಷಣಾ ಸಚಿವ ಪೆನ್ನಿ ಮೊರ್ಡಾಂಟ್ 92, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 86 ಮತ್ತು ಶಾಸಕ ಕೆಮಿ ಬಡೆನೋಚ್ 59 ಮತಗಳನ್ನು ಪಡೆದಿದ್ದಾರೆ. ಹೀಗಾಗಿ ಬಡೆನೋಚ್ ಸ್ಪರ್ಧೆಯಿಂದ ಹೊರಹೋಗಿದ್ದಾರೆ. ಇದೀಗ ಕೇವಲ ಮೂರು ಮಂದಿ ಆಕಾಂಕ್ಷಿಗಳು ಮಾತ್ರ ಉಳಿದುಕೊಂಡಿದ್ದಾರೆ.

ಟೋರಿ ಶಾಸಕರು ಇಂದು ಮತ್ತೊಮ್ಮೆ ಮತ ಚಲಾಯಿಸಲಿದ್ದಾರೆ ಮತ್ತು ಪ್ರತಿ ಬಾರಿಯೂ ಕಡಿಮೆ ಮತ ಗಳಿಸುವ ಆಕಾಂಕ್ಷಿ ಹೊರಹೋಗುತ್ತಾರೆ. ಐದನೇ ಸುತ್ತಿನ ಮತದಾನದ ನಂತರ ಇನ್ನಷ್ಟು ಪ್ರಕ್ರಿಯೆಗಳು ನಡೆದು ಅಂತಿಮವಾಗಿ ವಿಜೇತರನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುತ್ತದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top