News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

FAME-2 ಅಡಿ 68 ನಗರಗಳಲ್ಲಿ 2,877 EV ಚಾರ್ಜಿಂಗ್‌ ಸ್ಟೇಶನ್‌ ಮಂಜೂರು

ನವದೆಹಲಿ:‌ ಕೇಂದ್ರ ಸರ್ಕಾರವು 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಫೇಮ್ ಇಂಡಿಯಾ (ವಿದ್ಯುತ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ) ಯೋಜನೆಯ ಹಂತ-2 ರ ಅಡಿಯಲ್ಲಿ  ಮಂಜೂರು ಮಾಡಿದೆ.

ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಈ ವಿಷಯ ತಿಳಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ದೊಡ್ಡ ಪ್ರಮಾಣದ ಬಳಕೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರವು 2015 ರಲ್ಲಿ FAME ಇಂಡಿಯಾ ಯೋಜನೆಯನ್ನು ರೂಪಿಸಿದೆ.

ಫೇಮ್ ಇಂಡಿಯಾ ಯೋಜನೆಯಡಿ 9 ಎಕ್ಸ್‌ಪ್ರೆಸ್‌ವೇಗಳು ಮತ್ತು 16 ಹೆದ್ದಾರಿಗಳಲ್ಲಿ 1576 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸಹ ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಫೇಮ್ ಇಂಡಿಯಾ ಸ್ಕೀಮ್‌ನ ಹಂತ-1 ರ ಅಡಿಯಲ್ಲಿ, ಈ ವರ್ಷ ಜುಲೈ 1 ರಂದು 479 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ. 2019 ರ ಏಪ್ರಿಲ್ 1 ರಿಂದ ಐದು ವರ್ಷಗಳ ಅವಧಿಗೆ ಫೇಮ್-ಇಂಡಿಯಾ ಯೋಜನೆಯ ಹಂತ-2 ರ ಅಡಿಯಲ್ಲಿ 1000 ಕೋಟಿ ರೂಪಾಯಿಗಳನ್ನು ಚಾರ್ಜಿಂಗ್ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top