ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗಳು ಕೂಡ ಅತ್ಯಮೂಲ್ಯ. ಕೀಟದಿಂದ ಹಿಡಿದು ವ್ಯಾಘ್ರಗಳವರೆಗೆ ಎಲ್ಲವೂ ಪರಿಸರದ ಸಮತೋಲನ ಕಾಪಾಡುವಲ್ಲಿ ಕೊಡುಗೆಗಳನ್ನು ನೀಡುತ್ತವೆ. ಅಂತೆಯೇ ಹಾವುಗಳು ಕೂಡ. ಹಾವುಗಳೆಂದರೆ ಎಲ್ಲರೂ ಭಯಪಡುವವರೇ. ಆದರೆ ಹಾವುಗಳು ಇಲ್ಲದೆ ಭೂಮಿ ಇಲ್ಲ ಎಂಬುದನ್ನು ನಾವು ಮನದಟ್ಟು ಮಾಡಿಕೊಳ್ಳಬೇಕು. ಅದಕ್ಕಾಗಿಯೇ ಇಂದು ವಿಶ್ವ ಹಾವು ದಿನವನ್ನು ಆಚರಣೆ ಮಾಡಲಾಗುತ್ತದೆ.
ಭೂಮಿಯ ಮೇಲೆ 3,500 ಕ್ಕೂ ಹೆಚ್ಚು ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ ಹಾವುಗಳ ಉಳಿವು ಮತ್ತು ಸಂರಕ್ಷಣೆಯ ಬಗ್ಗೆ ನಾವು ಯಾರೂ ಹೆಚ್ಚಾಗಿ ಚರ್ಚೆ ನಡೆಸುವುದಿಲ್ಲ. ಅದೇ ಕಾರಣಕ್ಕೆ ಹಾವುಗಳ ಬಗ್ಗೆ ಜ್ಞಾನಕ್ಕಿಂತ ಅಜ್ಞಾನವೇ ಹೆಚ್ಚು. ಪ್ರೀತಿಗಿಂತ ಭಯವೇ ಹೆಚ್ಚು. ಆದರೆ ಹಲವಾರು ಪರಿಸರ ವ್ಯವಸ್ಥೆಗಳಿಗೆ ಹಾವುಗಳು ಅತ್ಯಗತ್ಯ. ಹೀಗಾಗಿ, ವಿವಿಧ ಜಾತಿಯ ಹಾವುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ವಿಶ್ವ ಹಾವುಗಳ ದಿನವನ್ನು ಪ್ರತಿವರ್ಷ ಜುಲೈ 16 ರಂದು ಆಚರಿಸಲಾಗುತ್ತದೆ.
ವಿಶ್ವ ಹಾವು ದಿನದ ಮೂಲ ತಿಳಿದಿಲ್ಲ. ಇದು ಯಾವುದೇ ಅಂತರರಾಷ್ಟ್ರೀಯ ಸಂಸ್ಥೆಯಿಂದ ಅಧಿಕೃತವಾಗಿ ಗುರುತಿಸಲ್ಪಟ್ಟಿಲ್ಲ. ಆದರೆ, ಹಾವು ಸಂರಕ್ಷಣೆಯ ಉದ್ದೇಶಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳು ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವು ದಿನವನ್ನು ಆಚರಿಸುತ್ತವೆ.
ಈ ಸರೀಸೃಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅವು ಪ್ರಪಂಚಕ್ಕೆ ಮತ್ತು ಅದರ ವಿಭಿನ್ನ ಪರಿಸರ ವ್ಯವಸ್ಥೆಗಳಿಗೆ ಎಷ್ಟು ಕೊಡುಗೆ ನೀಡುತ್ತವೆ ಎಂಬುದನ್ನು ಸಾರಿ ಸಾರಿ ಹೇಳಲು ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.
ಇತರ ವನ್ಯಜೀವಿಗಳಂತೆ, ಹಾವುಗಳು ಸಹ ಹವಾಮಾನ ಬದಲಾವಣೆ, ರೋಗ ಮತ್ತು ಆವಾಸಸ್ಥಾನಗಳ ನಷ್ಟ ಮುಂತಾದ ಋಣಾತ್ಮಕ ಪರಿಣಾಮದಿಂದ ಬಾಂಧಿತಗೊಂಡಿವೆ. ಹಾವುಗಳು ಆಹಾರ ಜಾಲ ಭೂಮಿಯ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ, ಅವು ನೈಸರ್ಗಿಕ ಕೀಟ ನಿಯಂತ್ರಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ನೈಸರ್ಗಿಕ ಆಹಾರ ಸರಪಳಿಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಅವು ಅತ್ಯಗತ್ಯ ಕೊಡುಗೆ ನೀಡುತ್ತವೆ. ಆದರೆ ಹಾವುಗಳ ಬಗ್ಗೆ ಚಾಲ್ತಿಯಲ್ಲಿರುವ ನಕಾರಾತ್ಮಕ ಮನೋಭಾವ ಮತ್ತು ಭಾಗಶಃ ಅಜ್ಞಾನದಿಂದಾಗಿ ಅವುಗಳ ಸಂರಕ್ಷಣೆಯ ಅಗತ್ಯತೆ ಮತ್ತು ಅವುಗಳ ಬದುಕುಳಿಯುವ ಸಮಸ್ಯೆಗಳು ಅಷ್ಟೇನೂ ಚರ್ಚಿಸಲ್ಪಡುವುದಿಲ್ಲ. ಭಯ ಮತ್ತು ನಿರ್ಲಕ್ಷ್ಯವು ಹಾವಿನ ಸಂರಕ್ಷಣೆಗೆ ದೊಡ್ಡ ಅಡೆತಡೆಗಳು ಎಂದೇ ಭಾವಿಸಲಾಗಿದೆ.
ಹೀಗಾಗಿ, ಜಗತ್ತಿನಲ್ಲಿ ಹಾವುಗಳ ಗುಣಲಕ್ಷಣಗಳು ಮತ್ತು ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಮುಖ್ಯವಾಗಿದೆ. ವಿಶ್ವ ಹಾವು ದಿನವು ಜಾಗತಿಕವಾಗಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಪ್ರಮುಖ ವಾರ್ಷಿಕ ಕಾರ್ಯಕ್ರಮವಾಗಿದೆ.
ಭೂಮಿಯು 3,500 ಕ್ಕೂ ಹೆಚ್ಚು ಜಾತಿಯ ಹಾವುಗಳಿಗೆ ನೆಲೆಯಾಗಿದೆ, ಅವುಗಳಲ್ಲಿ 600 ಮಾತ್ರ ವಿಷಕಾರಿ. ಆದರೂ, ಈ ಕೈಕಾಲುಗಳಿಲ್ಲದ, ಕೊಳವೆಯಾಕಾರದ ಸರೀಸೃಪಗಳನ್ನು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ವಿಶ್ವ ಹಾವು ದಿನವು ನಿಮ್ಮ ಭಯವನ್ನು ಹೋಗಲಾಡಿಸಲು, ಹಾವುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಅವುಗಳ ಸಂರಕ್ಷಣೆಗೆ ಕೊಡುಗೆ ನೀಡಲು ಉತ್ತಮ ಅವಕಾಶವನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.