News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

75ನೇ ಸ್ವಾತಂತ್ರ್ಯೋತ್ಸವ: ಯೋಧರಿಗೆ ಉಂಗುರ ಗಿಫ್ಟ್‌ ನೀಡಿದ ಆಭರಣ ಸಂಸ್ಥೆ

ಪುಣೆ: ಪುಣೆ ಮೂಲದ ಆಭರಣ ಸಂಸ್ಥೆ ಬೋನಿಸಾ ವಿವಿಧ ರಾಜ್ಯಗಳ ಸೈನಿಕರಿಗೆ ಬೆಳ್ಳಿ, ಚಿನ್ನ, ವಜ್ರ ಮತ್ತು ಮಣ್ಣಿನಿಂದ ಮಾಡಿದ ಉಂಗುರಗಳನ್ನು ಉಡುಗೊರೆಯಾಗಿ ನೀಡಲು ‘ಎಕ್ ಇಂಡಿಯಾ ಮಿಷನ್’ ಅನ್ನು ಪ್ರಾರಂಭಿಸಿದೆ.

ಭಾರತದ 75 ನೇ ಸ್ವಾತಂತ್ರ್ಯದ ‘ಭಾರತ್ ಕಾ ಅಮೃತ್ ಮಹೋತ್ಸವ’ವನ್ನು ಗುರುತಿಸಲು ಈ ವರ್ಷ 7,500 ಸೈನಿಕರಿಗೆ ‘commitment rings’ ಎಂಬ ಹೆಸರಿನಲ್ಲಿ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇದರ ಭಾಗವಾಗಿ, ಗುರುವಾರ ನಡೆದ ಸಮಾರಂಭದಲ್ಲಿ ಖಾಡ್ಕಿಯ ಪಾರ್ಶ್ವವಾಯು ಪುನರ್ವಸತಿ ಕೇಂದ್ರ (ಪಿಆರ್‌ಸಿ) ಯಲ್ಲಿರುವ 88 ನಿವೃತ್ತ ಸೈನಿಕರಿಗೆ ‘commitment rings’ ನೀಡಲಾಗಿದೆ.

ಬೋನಿಸಾ  ಪಾಲುದಾರ ಸಂಕೇತ್ ಬಿಯಾನಿ ಮಾತನಾಡಿ, “ಏಕ್‌ ಇಂಡಿಯಾ ರಿಂಗ್‌ನ ಬೆಳ್ಳಿ ನಮ್ಮನ್ನು ಶಾಂತವಾಗಿಡುತ್ತದೆ, ಚಿನ್ನ ಇದು ‘ಭಾರತ’ವನ್ನು ಸಂಕೇತಿಸುತ್ತದೆ, ನಮ್ಮ ದೇಶದ ಪ್ರತಿಯೊಂದು ರಾಜ್ಯದ ಏಕತೆಯನ್ನು ಮಣ್ಣು ಸೂಚಿಸುತ್ತದೆ ಮತ್ತು ವಜ್ರವು ನಮ್ಮೆಲ್ಲರಂತೆಯೇ ವಜ್ರವಾಗಿದೆ” ಎಂದಿದ್ದಾರೆ.

ಈ ವರ್ಷ 7,500 ಕ್ಕೂ ಹೆಚ್ಚು ಸೈನಿಕರಿಗೆ ಉಂಗುರವನ್ನು ನೀಡುವ ಗುರಿಯನ್ನು ತಮ್ಮ ಕಂಪನಿ ಹೊಂದಿದೆ ಎಂದು ಬಿಯಾನಿ ಹೇಳಿದ್ದಾರೆ.

ಉಂಗುರವನ್ನು ಬೆಳ್ಳಿಯಿಂದ ಮಾಡಲಾಗಿದ್ದು, ಅದರ ಮೇಲೆ ‘ಭಾರತ್’ ಎಂದು ಬರೆಯಲಾಗಿದೆ, ಇದಕ್ಕೆ ಚಿನ್ನವನ್ನು ಲೇಪಿತಸಲಾಗಿ.ಈ ಉಂಗುರವು ದೇಶದ ಏಕತೆಯನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top