ನ್ಯೂಯಾರ್ಕ್: ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಮಿಷನ್ (ಯುಎನ್ಎಂಐಎಸ್ಎಸ್) ಫೋರ್ಸ್ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಬುಧವಾರ ಪ್ರಕಟಿಸಿದ್ದಾರೆ.
“ಯುಎನ್ ಸೆಕ್ರೆಟರಿ ಜನರಲ್ ಅವರು ಭಾರತದ ಲೆಫ್ಟಿನೆಂಟ್ ಜನರಲ್ ಮೋಹನ್ ಸುಬ್ರಮಣಿಯನ್ ಅವರನ್ನು ದಕ್ಷಿಣ ಸುಡಾನ್ನಲ್ಲಿರುವ ವಿಶ್ವಸಂಸ್ಥೆಯ ಮಿಷನ್ನ (ಯುಎನ್ಎಂಐಎಸ್ಎಸ್) ಹೊಸ ಫೋರ್ಸ್ ಕಮಾಂಡರ್ ಆಗಿ ನೇಮಕ ಮಾಡಿದ್ದಾರೆ” ಎಂದು ಘೋಷಿಸಲಾಗಿದೆ.
ಲೆಫ್ಟಿನೆಂಟ್ ಜನರಲ್ ಸುಬ್ರಮಣಿಯನ್ ಅವರು ಭಾರತದ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನೈಕರ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಯುಎನ್ಎಂಐಎಸ್ಎಸ್ ಫೋರ್ಸ್ ಕಮಾಂಡರ್ ಆಗಿ ನಿರ್ಗಮಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಶೈಲೇಶ್ ತಿನಾಯ್ಕರ್ ಅವರ ದಣಿವರಿಯದ ಸಮರ್ಪಣೆ, ಅಮೂಲ್ಯ ಸೇವೆ ಮತ್ತು ಪರಿಣಾಮಕಾರಿ ನಾಯಕತ್ವಕ್ಕಾಗಿ ಸೆಕ್ರೆಟರಿ-ಜನರಲ್ ಅವರು ಕೃತಜ್ಞರಾಗಿದ್ದಾರೆ ಎಂದು ಯುಎನ್ ಪ್ರಕಟಣೆ ತಿಳಿಸಿದೆ.
ಲೆಫ್ಟಿನೆಂಟ್ ಜನರಲ್ ಸುಬ್ರಮಣಿಯನ್ ಅವರು 36 ವರ್ಷಗಳಿಂದ ಭಾರತೀಯ ಸೇನೆಯೊಂದಿಗೆ ಬೆಸುಗೆ ಹೊಂದಿದ್ದಾರೆ. ತೀರಾ ಇತ್ತೀಚೆಗೆ, ಅವರು ಮಧ್ಯ ಭಾರತದಲ್ಲಿ ಸೇನಾ ವಲಯದ (ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ ರೆಡಿನೆಸ್ ವಲಯ) ಜನರಲ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದ್ದರಯ, ಸೇನೆಯ ಕಾರ್ಯಾಚರಣೆ ಮತ್ತು ಲಾಜಿಸ್ಟಿಕ್ ಸನ್ನದ್ಧತೆಗೆ ಕೊಡುಗೆ ನೀಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.