ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದ್ದು, ಮೊದಲ ಮೈನ್ಲೈನ್ ಕಂಟೈನರ್ ಹಡಗು MSC ಎರ್ಮಿನಿಯಾವನ್ನು ಸ್ವಾಗತಿಸಿದೆ.
276.5 ಮೀಟರ್ ಉದ್ದವಿರುವ ಎಂಎಸ್ಸಿ ಎರ್ಮಿನಿಯಾ ಹಡಗು ವಿಶ್ವದ ಅತಿದೊಡ್ಡ ಕಂಟೈನರ್ ಹಡಗುಗಳಲ್ಲಿ ಒಂದಾಗಿದೆ ಮತ್ತು ಭಾನುವಾರ ಇದು ನವ ಮಂಗಳೂರಿಗೆ ಆಗಮಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದೆ. ಹಡಗಿನ ಉದ್ದ 276.5 ಮೀಟರ್ ಮತ್ತು ಡ್ರಾಫ್ಟ್ 12.8 ಮೀಟರ್.
ಈ ಹಡಗು 1,771 ಟಿಐಯು (ಟ್ವೆಂಟಿ ಫೂಟ್ ಇಕ್ವೆಲೆಂಟ್ ಯೂನಿಟ್) ಹಾಗೂ 1,265 ಪ್ರಮುಖ ಕಂಟೈನರ್ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮಂಗಳೂರಿಗೆ ಬಂದ ಈ ಹಡಗನ್ನು ಜಲಫಿರಂಗಿ ಮೂಲಕ ಸ್ವಾಗತಿಸಲಾಯಿತು. ಭಾನುವಾರ ಸಂಜೆ ಆಗಮಿಸಿದ ಈ ಹಡಗು ಸರಕುಗಳನ್ನು ಹೊತ್ತು ಇಂದು ನಿರ್ಗಮಿಸುವ ಸಾಧ್ಯತೆಯಿದೆ.
ಬಂದರಿಗೆ ಮೈನ್ಲೈನ್ ಕಂಟೈನರ್ ಸಾಗಣೆಯ ಹಡಗು ಆಗಮಿಸಬೇಕಾದರೆ ಅದಕ್ಕೆ ಬೇಕಾಗುವಷ್ಟು ಕಂಟೈನರ್ ಸರಕುಗಳು ಇರುವುದು ಅವಶ್ಯಕ. ಇಲ್ಲದಿದ್ದರೆ ಮಧ್ಯಮ ಗಾತ್ರದ ಹಡಗುಗಳಲ್ಲೇ ಸರಕುಗಳನ್ನು ತುಂಬಿಸಿ ಇತರ ಬಂದರಿಗೆ ಕೊಂಡೊಯ್ದು, ನಂತರ ಅಲ್ಲಿ ಮೈನ್ಲೈನ್ ಕಂಟೈನರ್ ಹಡಗಿಗೆ ತುಂಬಬೇಕಾಗುತ್ತದೆ. ಪ್ರಸ್ತುತ ಅವಶ್ಯವಿರುವಷ್ಟು ಸರಕು ನವಮಂಗಳೂರು ಬಂದರಿನಲ್ಲಿ ಇರುವುದರಿಂದ ಮೈನ್ಲೈನ್ ಕಂಟೈನರ್ ಹಡಗು ಇಲ್ಲಿಗೆ ಆಗಮಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.