
ನವದೆಹಲಿ: ಭಾರತದ ತೇಜಸ್ ಲಘು ಯುದ್ಧ ವಿಮಾನವು ಮಲೇಷ್ಯಾದ ಅಗ್ರ ಆಯ್ಕೆಯಾಗಿ ಹೊರಹೊಮ್ಮಿದೆ. ಮಲೇಷ್ಯಾವು ತನ್ನ ವಯಸ್ಸಾದ ಯುದ್ಧ ವಿಮಾನಗಳ ಫ್ಲೀಟ್ ಅನ್ನು ಬದಲಿಸಲು ಮುಂದಾಗಿದ್ದು, ಇದಕ್ಕಾಗಿ ತೇಜಸ್ನತ್ತ ನೋಡುತ್ತಿದೆ. ಉಭಯ ದೇಶಗಳು ಖರೀದಿ ಒಪ್ಪಂದವನ್ನು ದೃಢೀಕರಿಸಲು ಮಾತುಕತೆಗಳನ್ನು ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಚೀನಾದ ಜೆಎಫ್-17 ಜೆಟ್, ದಕ್ಷಿಣ ಕೊರಿಯಾದ ಎಫ್ಎ-50 ಮತ್ತು ರಷ್ಯಾದ ಮಿಗ್-35 ಹಾಗೂ ಯಾಕ್-130 ವಿಮಾನಗಳ ತೀವ್ರ ಪೈಪೋಟಿಯ ನಡುವೆಯೂ ಮಲೇಷ್ಯಾ ಭಾರತೀಯ ವಿಮಾನಗಳನ್ನು ಆಯ್ಕೆ ಮಾಡಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ ಮಾಧವನ್ ತಿಳಿಸಿದ್ದಾರೆ.
ಈ ಪ್ಯಾಕೇಜ್ ಭಾಗವಾಗಿ, ಭಾರತವು ತನ್ನ ರಷ್ಯಾ ಮೂಲದ Su-30 ಫೈಟರ್ ಫ್ಲೀಟ್ಗಾಗಿ ಮಲೇಷ್ಯಾದಲ್ಲಿ MRO (ನಿರ್ವಹಣೆ, ದುರಸ್ತಿ ಮತ್ತು ಕೂಲಂಕುಷ) ಸೌಲಭ್ಯವನ್ನು ಸ್ಥಾಪಿಸಲು ಮುಂದಾಗಿದೆ. ಪಾಶ್ಚಿಮಾತ್ಯ ನಿರ್ಬಂಧಗಳ ಕಾರಣ ರಷ್ಯಾದಿಂದ ವಿಮಾನಗಳಿಗೆ ಬಿಡಿಭಾಗಗಳನ್ನು ಸಂಗ್ರಹಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಒಪ್ಪಂದ ಶೀಘ್ರವೇ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಮಾಧವನ್ ಹೇಳಿದ್ದಾರೆ.
“ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ. ರಷ್ಯಾವನ್ನು ಹೊರತುಪಡಿಸಿ ಅವರ Su-30 ವಿಮಾನಗಳಿಗೆ ಬೆಂಬಲವನ್ನು ನೀಡುತ್ತಿರುವ ಏಕೈಕ ದೇಶ ನಮ್ಮದು, ಸುಖೋಯ್ ಫ್ಲೀಟ್ಗೆ ಅಗತ್ಯವಿರುವ ಮಟ್ಟಿಗೆ ಅವರನ್ನು ಬೆಂಬಲಿಸಲು ನಾವು ಮಾತ್ರ ಸಾಧ್ಯ” ಎಂದು ಮಾಧವನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


