ನವದೆಹಲಿ: ಇತ್ತೀಚಿಗೆ ಕ್ರಿಕೆಟ್ನಿಂದ ನಿವೃತ್ತರಾದ ಲೆಜೆಂಡರಿ ಭಾರತೀಯ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಂದ ವಿಶೇಷ ಪತ್ರವೊಂದನ್ನು ಸ್ವೀಕರಿಸಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಅವರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದು, ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಎರಡು ದಶಕಗಳ ಕಾಲ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿರುವ ಮಿಥಾಲಿ, ಪ್ರಧಾನಿ ಮೋದಿಯವರಿಂದ ಪತ್ರವನ್ನು ಸ್ವೀಕರಿಸಿರುವುದು ನನಗೆ ಗೌರವ ಮತ್ತು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ ಮಿಥಾಲಿ ರಾಜ್ ಎರಡು ವಿಭಿನ್ನ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದು, ತಾನು ಸೇರಿದಂತೆ ಲಕ್ಷಾಂತರ ಭಾರತೀಯರಿಗೆ ರೋಲ್ ಮಾಡೆಲ್ ಮತ್ತು ಸ್ಪೂರ್ತಿಯಾಗಿರುವ ಪ್ರಧಾನಿ ಮೋದಿಯವರಿಂದ ಪ್ರೋತ್ಸಾಹದ ಮಾತುಗಳನ್ನು ಸ್ವೀಕರಿಸಿರುವುದು ಹೆಮ್ಮೆಯ ಕ್ಷಣವಾಗಿದೆ ಎಂದಿದ್ದಾರೆ.
ಭಾರತೀಯ ಕ್ರೀಡೆಗಳ ಬೆಳವಣಿಗೆಗೆ ಸಹಾಯ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಟ್ಟಿರುವ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
It’s a matter of singular honour & pride when one receives such warm encouragement from our Hon'ble PM Shri @narendramodi ji, who is a role model & inspiration for millions including me. I am overwhelmed by this thoughtfully worded acknowledgment of my contribution to cricket. pic.twitter.com/cTmqB6ZdNT
— Mithali Raj (@M_Raj03) July 2, 2022
I will treasure this forever.
I feel inspired and encouraged for my next chapter and will strive hard to live up to the expectations of our Hon'ble PM in contributing towards the growth of Indian sports. 🙏— Mithali Raj (@M_Raj03) July 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.