ಬೆಳ್ತಂಗಡಿ : ಸೆ.1ರಂದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿಯಲ್ಲಿ ಸಂಭವಿಸಿದ ಟ್ಯಾಂಕರ್ ದುರಂತದ ಕುರಿತು ತೀವ್ರ ಸಂತಾಪವನ್ನು ವ್ಯಕ್ತಪಡಿಸಿರುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ದುರಂತದಲ್ಲಿ ಮರಣ ಹೊಂದಿದವರ ಕುಟುಂಬಕ್ಕೆ ರೂ.3.50 ಲಕ್ಷವನ್ನು ಪರಿಹಾರ ಪ್ರಕಟಿಸಿದ್ದಾರೆ. ಅಪಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದಾರೆ.
ಸಂತ್ರಸ್ಥ ಕುಟುಂಬಗಳ ಪರಿಶೀಲನೆಯನ್ನು ನಡೆಸುವಂತೆ ಹೆಗ್ಗಡೆಯವರು ಸೂಚಿಸಿದ್ದು, ತತ್ಕಾಲಕ್ಕೆ ಪರಿಹಾರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ.3.50 ಲಕ್ಷ ಮೊತ್ತವನ್ನು ಬಿಡುಗಡೆ ಮಾಡಿರುತ್ತಾರೆ. ತೀವ್ರ ಹಾನಿಗೊಳಗಾದ 2 ಕುಟುಂಬಗಳಿಗೆ ತಲಾ ರೂ.50,000/- ದಂತೆ, 8 ಕುಟುಂಬಗಳಿಗೆ ತಲಾ ರೂ.25,000/-ದಂತೆ ಮತ್ತು 5 ಕುಟುಂಬಗಳಿಗೆ ತಲಾ ರೂ.10,000/-ದಂತೆ ಮೊತ್ತವನ್ನು ಬಿಡುಗಡೆ ಮಾಡಿರುತ್ತಾರೆ. ಅಲ್ಲದೇ ಸಂತ್ರಸ್ಥ ಕುಟುಂಬಗಳಿಗೆ ಅಗತ್ಯವಿದ್ದಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡುವಂತೆ ಕುಮಟಾ ಯೋಜನಾಧಿಕಾರಿಯವರಿಗೆ ಸೂಚಿಸಿರುತ್ತಾರೆ.
ಸಂತ್ರಸ್ಥ ಕುಟುಂಬಗಳಿಗೆ ಸರ್ವರೀತಿಯ ಸಹಕಾರ ನೀಡುವಂತೆ ಯೋಜನೆಯ ಕಾರ್ಯಕರ್ತರಿಗೆ, ಒಕ್ಕೂಟದವರಿಗೆ, ಫಲಾನುಭವಿಗಳಿಗೆ ಆದೇಶ ನೀಡಿರುತ್ತಾರೆ. ಈ ವಿಷಯನ್ನು ಸೋಮವಾರ ತಿಳಿಸಿದ ಯೋಜನೆಯ ಉತ್ತರಕನ್ನಡ ಜಿಲ್ಲಾ ನಿರ್ದೇಶಕರಾದ ಲಕ್ಷ್ಮಣ್ರವರು ಈ ಕೂಡಲೇ ಪರಿಹಾರ ವಿತರಣೆ ನಡೆಸುವುದಾಗಿ ತಿಳಿಸಿರುತ್ತಾರೆ ಎಂದು ಯೋಜನೆಯ ಕಾರ್ಯನಿರ್ವಾಹ ನಿರ್ದೇಶಕ ಡಾ| ಎಲ್.ಎಚ್.ಮಂಜುನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.