ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.
ಸಾಮಾಜಿಕ ಜಾಲತಾಣ ಎಂಬುದು ಇಂದು ಬಹುತೇಕ ಜನರ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ. ಬೆರಳಣಿಕೆಯಷ್ಟು ಇದ್ದ ಸಾಮಾಜಿಕ ಜಾಲತಾಣಗಳು ಇಂದು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಬೆಳೆದುಬಿಟ್ಟಿವೆ. ಸಾಮಾಜಿಕ ಸಂವಹನದ ಉದ್ದೇಶಕ್ಕಾಗಿ ಹುಟ್ಟಿಕೊಂಡಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂದು ಸಾಮಾಜಿಕ ಜಾಲತಾಣಗಳಾಗಿ ದೊಡ್ಡ ಉದ್ಯಮಗಳಾಗಿ ಪರಿವರ್ತನೆಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರದ ಜನರನ್ನು ಇಂದು ಸಾಮಾಜಿಕವಾಗಿ ಹಿಂದುಳಿದವರು ಎಂದೇ ಪರಿಗಣಿಸುವ ಮಟ್ಟಕ್ಕೆ ಅವುಗಳು ನಮ್ಮನ್ನು ಪ್ರಭಾವಿಸಿ ಬಿಟ್ಟಿವೆ.
ಸಾಮಾಜಿಕ ಜಾಲತಾಣಗಳ ಇತಿಹಾಸವನ್ನು ಗಮನಿಸುವುದಾದರೆ, 1997ರಲ್ಲಿ ವೈನ್ರಿಚ್ ಎಂಬುವವರು ಸಿಕ್ಸ್ ಡಿಗ್ರೀಸ್ ಎಂಬ ಸಾಮಾಜಿಕ ಜಾಲತಾಣವನ್ನು ಆರಂಭ ಮಾಡಿದರು. ಆರಂಭದಲ್ಲಿ ಇದನ್ನು ಕೇವಲ ಆತ್ಮೀಯರ ಬಳಗ ಮಾತ್ರ ಬಳಸುತ್ತಿತ್ತು. ಇದರ ಬಳಕೆದಾರರ ಸಂಖ್ಯೆ 10 ಲಕ್ಷದವರೆಗೂ ತಲುಪಿತ್ತು. ಆದರೆ 2001ರಲ್ಲಿ ಇದು ಮುಚ್ಚಲ್ಪಟ್ಟಿತು. 2010ರ ಜೂನ್ 30ರಂದು ಮಾರ್ಷೇಬಲ್ ಎಂಬವರು ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ವಿಶ್ವದಲ್ಲಿ ಸಾವಿರಾರು ಸಾಮಾಜಿಕ ಜಾಲತಾಣಗಳು ಇವೆ. ಆದರೆ ಫೇಸ್ಬುಕ್, ಟ್ವಿಟರ್, ವಾಟ್ಸಪ್, ಇನ್ಸ್ಟಾಗ್ರಾಂ, ಲಿಂಕ್ಡ್ಇನ್, ಸ್ನ್ಯಾಪ್ ಚಾಟ್, ಪಿನ್ಟ್ರೆಸ್ಟ್, ಸ್ಕೈಪ್ ಮೊದಲಾದ ಸಾಮಾಜಿಕ ಜಾಲತಾಣ ವೇದಿಕೆಗಳು ಮಾತ್ರ ವ್ಯಾಪಕವಾಗಿ ಬಳಸಲ್ಪಡುತ್ತಿವೆ.
ಸಾಮಾಜಿಕ ಜಾಲತಾಣಗಳು ಇಂದು ಕೇವಲ ಸಂವಹನ ವೇದಿಕೆಗಳಾಗಿ ಉಳಿದಿಲ್ಲ.
ಇಂದು ವಿಶ್ವ ಸಾಮಾಜಿಕ ಜಾಲತಾಣ ದಿನ. ಪ್ರತಿವರ್ಷ ಜೂನ್ 30ರಂದು ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮಹತ್ವ, ಸಮಾಜದ ಮೇಲೆ ಅವುಗಳ ಸಕಾರಾತ್ಮಕ ಮತ್ತು ನಕಾರಾತ್ಮಕ ಪ್ರಭಾವ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ.
ಸಾಮಾಜಿಕ ಜಾಲತಾಣ ಎಂಬುದು ಇಂದು ಬಹುತೇಕ ಜನರ ಜೀವನದ ಅವಿಭಾಜ್ಯ ಅಂಗ ಎಂಬಂತಾಗಿದೆ. ಬೆರಳಣಿಕೆಯಷ್ಟು ಇದ್ದ ಸಾಮಾಜಿಕ ಜಾಲತಾಣಗಳು ಇಂದು ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ಬೆಳೆದುಬಿಟ್ಟಿವೆ. ಸಾಮಾಜಿಕ ಸಂವಹನದ ಉದ್ದೇಶಕ್ಕಾಗಿ ಹುಟ್ಟಿಕೊಂಡಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂದು ಸಾಮಾಜಿಕ ಜಾಲತಾಣಗಳಾಗಿ ದೊಡ್ಡ ಉದ್ಯಮಗಳಾಗಿ ಪರಿವರ್ತನೆಗೊಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರದ ಜನರನ್ನು ಇಂದು ಸಾಮಾಜಿಕವಾಗಿ ಹಿಂದುಳಿದವರು ಎಂದೇ ಪರಿಗಣಿಸುವ ಮಟ್ಟಕ್ಕೆ ಅವುಗಳು ನಮ್ಮನ್ನು ಪ್ರಭಾವಿಸಿ ಬಿಟ್ಟಿವೆ.
ಸಾಮಾಜಿಕ ಜಾಲತಾಣಗಳ ಇತಿಹಾಸವನ್ನು ಗಮನಿಸುವುದಾದರೆ, 1997ರಲ್ಲಿ ವೈನ್ರಿಚ್ ಎಂಬುವವರು ಸಿಕ್ಸ್ ಡಿಗ್ರೀಸ್ ಎಂಬ ಸಾಮಾಜಿಕ ಜಾಲತಾಣವನ್ನು ಆರಂಭ ಮಾಡಿದರು. ಆರಂಭದಲ್ಲಿ ಇದನ್ನು ಕೇವಲ ಆತ್ಮೀಯರ ಬಳಗ ಮಾತ್ರ ಬಳಸುತ್ತಿತ್ತು. ಇದರ ಬಳಕೆದಾರರ ಸಂಖ್ಯೆ 10 ಲಕ್ಷದ ವರೆಗೂ ತಲುಪಿತ್ತು. ಆದರೆ 2001ರಲ್ಲಿ ಇದು ಮುಚ್ಚಲ್ಪಟ್ಟಿತು. 2010ರ ಜೂನ್ 30ರಂದು ಮಾರ್ಷೇಬಲ್ ಎಂಬವರು ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಿಸಿದರು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ವಿಶ್ವದಲ್ಲಿ ಸಾವಿರಾರು ಸಾಮಾಜಿಕ ಜಾಲತಾಣಗಳು ಇವೆ. ಆದರೆ ಫೇಸ್ಬುಕ್, ಟ್ವಿಟರ್, ವಾಟ್ಸಪ್, ಇನ್ಸ್ಟಾಗ್ರಾಂ, ಲಿಂಕ್ಡ್ಇನ್, ಸ್ನ್ಯಾಪ್ ಚಾಟ್, ಪಿನ್ಟ್ರೆಸ್ಟ್, ಸ್ಕೈಪ್ ಮೊದಲಾದ ಸಾಮಾಜಿಕ ಜಾಲತಾಣ ವೇದಿಕೆಗಳು ಮಾತ್ರ ವ್ಯಾಪಕವಾಗಿ ಬಳಸಲ್ಪಡುತ್ತಿವೆ.
ಸಾಮಾಜಿಕ ಜಾಲತಾಣಗಳು ಉತ್ತಮ ಉದ್ದೇಶಕ್ಕಾಗಿಯೇ ಹುಟ್ಟಿಕೊಂಡಿವೆ. ಆದರೆ ಇಂದು ಇವು ಸಮಾಜದ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಎರಡೂ ಪರಿಣಾಮಗಳನ್ನು ಬೀರುತ್ತಿದೆ. ಆದರೆ ಇವುಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಜಾಣತನ ಬಳಕೆದಾರರಿಗೆ ಇರಲೇಬೇಕು.
ಸಾಮಾಜಿಕ ಜಾಲತಾಣಗಳು ಇಂದು ಕೇವಲ ಸಂವಹನ ವೇದಿಕೆಗಳಾಗಿ ಉಳಿದಿಲ್ಲ. ಕಳೆದು ಹೋದ ಸಂಬಂಧವನ್ನು ಮತ್ತೆ ಬೆಸೆಯುವ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲು ನೆರವು ಹೊಂದಿಸುವ, ಸಮಾಜ ಸೇವೆಗಾಗಿ ಜನರನ್ನು ಒಟ್ಟುಗೂಡಿಸುವ ವೇದಿಕೆಯಾಗಿಯೂ ಕಾರ್ಯನಿರ್ವಹಿಸುತ್ತಿವೆ. ಸುದ್ದಿಗಳನ್ನು ತಲುಪಿಸುವ, ಮಾಹಿತಿಗಳನ್ನು ನೀಡುವ ವೇದಿಕೆಯಾಗಿಯೂ ಸಾಮಾಜಿಕ ಜಾಲ ತಾಣ ಮಾರ್ಪಟ್ಟಿದೆ.
ಇಂದು ಬಹುತೇಕ ಮಂದಿ ಸುದ್ದಿಗಾಗಿ ಸಾಮಾಜಿಕ ಜಾಲತಾಣಗಳನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಇಲ್ಲಿ ಬರುವ ಮಾಹಿತಿಗಳನ್ನು ಪರಾಮರ್ಶೆ ಮಾಡದೆಯೇ ನಂಬಿ ಬಿಡುವ ಜನರ ಸಂಖ್ಯೆಯೂ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣಗಳ ಪರಿಣಾಮವಾಗಿ ಇಂದು ಖಾಸಗಿ ಜೀವನಗಳು ಖಾಸಗಿಯಾಗಿ ಉಳಿದಿಲ್ಲ. ಬೆಳಗಿನ ಉಪಹಾರದಿಂದ ಹಿಡಿದು ರಾತ್ರಿಯ ನಿದ್ರೆಯವರೆಗಿನ ದಿನಚರಿಯನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮನಸ್ಥಿತಿಗಳೂ ನಮ್ಮ ನಡುವೆ ಇವೆ. ಕೋಮುದ್ವೇಷವನ್ನು ಹರಡುವ, ಒಬ್ಬರ ಬಗ್ಗೆ ವೃಥಾ ಆರೋಪಗಳನ್ನು ಮಾಡುವ ವೇದಿಕೆಯಾಗಿಯೂ ಇದು ಮಾರ್ಪಟ್ಟಿದೆ. ಈ ಎಲ್ಲಾ ನಕಾರಾತ್ಮಕ ವಿಷಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದಲೇ ವಿಶ್ವ ಸಾಮಾಜಿಕ ಜಾಲತಾಣ ದಿನವನ್ನು ಆಚರಣೆ ಮಾಡಲಾಗುತ್ತದೆ.
ಅದೇನೆ ಇದ್ದರೂ ಸಾಮಾಜಿಕ ಜಾಲತಾಣಗಳನ್ನು ಹೇಗೆ ಬಳಕೆ ಮಾಡಬೇಕು ಎಂಬ ಅರಿವು ಪ್ರತಿಯೊಬ್ಬ ಬಳಕೆದಾರನಿಗೆ ಇರಬೇಕು. ಅದರ ಸಾಧಕ-ಭಾದಕಗಳ ಬಗ್ಗೆ ನಿಗಾ ಇರಬೇಕು. ಇಲ್ಲವಾದರೆ ಉತ್ತಮ ಉದ್ದೇಶಕ್ಕಾಗಿ ಹುಟ್ಟಿಕೊಂಡ ವೇದಿಕೆ ಸಮಾಜದ ಸ್ವಾಸ್ಥ್ಯ ಕೆಡಿಸುವ ವೇದಿಕೆಯಾಗಿ ಹೊರಹೊಮ್ಮುವ ಅಪಾಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.