ಕೊಯಂಬತ್ತೂರಿನಲ್ಲಿ ಆಟೋ ಟ್ರೈವರ್ ಆಗಿ ಜೀವನ ಸಾಗಿಸುತ್ತಿರುವ ಚಂದ್ರಕುಮಾರ್ ವೆನ್ಸಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ಆಟೋ ಚಾಲಕನಿಗೆ ವಿದೇಶದಲ್ಲಿ ನಡೆಯುವ ಫಿಲ್ಮ್ಫೆಸ್ಟ್ಗೆ ಆಹ್ವಾನ ನೀಡಿದವರು ಯಾರು? ಆತನಿಗೇಕೆ ಆಹ್ವಾನ ಎಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಅವರ ಸಾಧನೆಗೆ ದೊರೆತ ಪ್ರತಿಫಲವಿದು.
ಚಂದ್ರಕುಮಾರ್ ಅವರು ಬರೆದ ಕಾದಂಬರಿಯನ್ನು ಆಧರಿಸಿ ತಮಿಳಿನಲ್ಲಿ ಸಿನಿಮಾವೊಂದು ಬಂದಿದೆ. ಉತ್ತಮ ಸಾಮಾಜಿಕ ಚಿತ್ರವಾಗಿರುವ ಅದು ವೆನ್ಸಿ ಅಂತಾರಾಷ್ಟ್ರೀಯ ಫಿಲ್ಮ್ಫೆಸ್ಟ್ಗೆ ಆಯ್ಕೆಯಾಗಿದೆ. ಹೀಗಾಗಿ ಅದರ ಲೇಖಕನಾಗಿ ಚಂದ್ರಕುಮಾರ್ ಅಲ್ಲಿಗೆ ತೆರಳಲಿದ್ದಾರೆ.
51 ವರ್ಷದ ಚಂದ್ರಕುಮಾರ್ 10ನೇ ತರಗತಿಯಲ್ಲಿ ಶಾಲೆಬಿಟ್ಟು ಆಟೋ ಚಾಲಕನಾದವರು. ಆದರೆ ಬರವಣಿಗೆ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಇವರು ಟ್ರಾಫಿಕ್ ಜಾಮ್ನಲ್ಲಿ, ಗ್ರಾಹಕರಿಗಾಗಿ ಕಾಯುವಾಗ ಹೀಗೆ ಸಮಯ ಸಿಕ್ಕಾಗಲೆಲ್ಲಾ ಕೈಗೆ ಪೆನ್ನು ತೆಗೆದುಕೊಂಡು ಬರೆಯುತ್ತಾರೆ.
2006ರಲ್ಲಿ ಬಿಡುಗಡೆಯಾದ ಅವರು ಬರೆದ ‘ಲಾಕ್ ಅಪ್’ ಎಂಬ ಪುಸ್ತಕವನ್ನು ಆಧರಿಸಿ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ‘ವಿಸರನೈ’ ಎಂಬ ಸಿನಿಮಾವನ್ನು ನಿರ್ಮಿಸಿದರು. ಈ ಸಿನಿಮಾ ಇದೀಗ ವೆನ್ಸಿ ಅಂತಾರಾಷ್ಟ್ರೀಯ ಫಿಲ್ಮ್ಫೆಸ್ಟ್ಗೆ ಆಯ್ಕೆಯಾಗಿದೆ.
ಅವರು ಬರೆದ ಈ ಪುಸ್ತಕ 2006ರಲ್ಲಿ ’ಬೆಸ್ಟ್ ಡಾಕ್ಯುಮೆಂಟ್ ಆಫ್ ಹ್ಯೂಮನ್ ರೈಟ್ಸ್’ ಪ್ರಶಸ್ತಿಯನ್ನೂ ಪಡೆದಿದೆ.
ಆಂಧ್ರದಲ್ಲಿ ಪೊಲೀಸರು ಇವರು ಮತ್ತು ಇವರ ಸ್ನೇಹಿತರನ್ನು ಯಾವುದೇ ಕಾರಣವಿಲ್ಲದೆ ಸ್ಟೇಶನ್ನಿಗೆ ಎಳೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದರು, ಈ ಕೆಟ್ಟ ಅನುಭವದಿಂದ ಪ್ರೇರಣೆ ಪಡೆದು ಅವರು ’ಲಾಕ್ಅಪ್’ ಪುಸ್ತಕವನ್ನು ಬರೆದಿದ್ದಾರೆ.
ಓದಿದ್ದು 10ನೇ ತರಗತಿಯಾದರು ಬರವಣಿಗೆಯನ್ನು ಆಸಕ್ತಿಯನ್ನಾಗಿಸಿಕೊಂಡು ಅವರು ಹಲವಾರು ಲೇಖನಗಳನ್ನು ಬರೆದಿದ್ದಾರೆ. ಆ ಮೂಲಕ ಇತರರಿಗೂ ಪ್ರೇರಣೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.