ನವದೆಹಲಿ: ಮೂರು ಸಿಂಗಾಪುರದ ಉಪಗ್ರಹಗಳನ್ನು ಹೊತ್ತ ಭಾರತದ ರಾಕೆಟ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ಎಲ್ವಿ) ನಾಳೆ ಉಡಾವಣೆಗೊಳ್ಳಲಿದೆ. ಇದಕ್ಕಾಗಿ ಇಂದು ಸಂಜೆ 5 ಗಂಟೆಗೆ 25 ಗಂಟೆಗಳ ಕೌಂಟ್ಡೌನ್ ಪ್ರಾರಂಭವಾಗಲಿದೆ.
ಈ ಮಿಷನ್ ಅನ್ನು PSLV-C53/DS-EO ಎಂದು ಹೆಸರಿಸಲಾಗಿದೆ.
ಭಾರತೀಯ ರಾಕೆಟ್ ಮೂರು ಉಪಗ್ರಹಗಳನ್ನು ಹೊತ್ತೊಯ್ಯುತ್ತದೆ. ಅದೆಂದರೆ 365 ಕೆಜಿ ತೂಕದ ಡಿಎಸ್-ಇಒ ಮತ್ತು 155 ಕೆಜಿ ತೂಕದ ನ್ಯೂಸಾರ್. ಇದು ಸಿಂಗಾಪುರಕ್ಕೆ ಸೇರಿದ ಮತ್ತು ದಕ್ಷಿಣ ಕೊರಿಯಾದ ಸ್ಟಾರೆಕ್ ಇನಿಶಿಯೇಟಿವ್ ನಿರ್ಮಿಸಿದ ಉಪಗ್ರಹಗಳು. ಉಡಾವಣೆಯಾಗಲಿರುವ ಮೂರನೇ ಉಪಗ್ರಹ ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯದ (NTU) 2.8 ಕೆಜಿ ಸ್ಕೂಬ್-1 ಆಗಿದೆ.
ಉಡಾವಣೆ ಯಶಸ್ವಿಯಾದರೆ, ಪಿಎಸ್ಎಲ್ವಿ ರಾಕೆಟ್ 1999 ರಿಂದ 36 ದೇಶಗಳಿಗೆ ಸೇರಿದ 345 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿದಂತಾಗುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಾರ, PSLV-C53 ರಾಕೆಟ್ ಶ್ರೀಹರಿಕೋಟಾ ರಾಕೆಟ್ ಬಂದರಿನಲ್ಲಿರುವ ಎರಡನೇ ಉಡಾವಣಾ ಕೇಂದ್ರದಿಂದ ನಾಳೆ ಸಂಜೆ 6 ಗಂಟೆಗೆ ಉಡಾವಣೆಯಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.