ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜರ್ಮನಿಯಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಹಲವಾರು ವಿಶ್ವನಾಯಕರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಆದರೆ ಅಮೆರಿಕಾ ಅಧ್ಯಕ್ಷ ಮತ್ತು ಮೋದಿಯವರ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೋದಿ ಅವರು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರೊಂದಿಗೆ ಮಾತನಾಡುತ್ತಾ ಗ್ರೂಪ್ ಫೋಟೋಗೆ ಫೋಸ್ ಕೊಡಲು ಸಿದ್ಧವಾಗುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮೋದಿಯನ್ನು ಗಮನಿಸಿ ಅವರ ಬಳಿ ವೇಗವಾಗಿ ಬಂದು ಅವರ ಭುಜಗಳನ್ನು ತಟ್ಟಿದ್ದಾರೆ. ತಕ್ಷಣವೇ ಮೋದಿ ಆತ್ಮೀಯವಾಗಿ ಬೈಡನ್ ಅವರ ಕೈಗಳನ್ನು ಹಿಡಿದು ಮಾತುಕತೆ ನಡೆಸಿದ್ದಾರೆ. ಈ ಅಮೋಘ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿ ವೈರಲ್ ಆಗಿದೆ.
ಇಬ್ಬರ ನಡುವಣ ಆತ್ಮೀಯ ಕ್ಷಣ ಮತ್ತು ಒಡನಾಟ ವಿಡಿಯೋದಲ್ಲಿ ಸೆರೆಯಾಗಿದೆ. ನಾಯಕರು ಪರಸ್ಪರ ಶುಭಾಶಯ ಕೋರಿದ್ದಾರೆ. ಉಭಯ ನಾಯಕರ ಮುಖದಲ್ಲಿನ ನಗು ಎಲ್ಲರನ್ನೂ ಆಕರ್ಷಿದೆ.
ಜಗತ್ತಿನ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾದ ಅಧ್ಯಕ್ಷರು ಇತರ ದೇಶಗಳ ನಾಯಕರ ನಡುವೆ ಇದ್ದ ಮೋದಿಯನ್ನು ಕಂಡೊಡನೆ ಅವರ ಬಳಿ ಆಗಮಿಸಿ ಭುಜ ತಟ್ಟಿ ಮಾತುಕತೆಗೆ ಇಳಿದಿದ್ದು ಭಾರತದ ಹೆಚ್ಚುತ್ತಿರುವ ಘನತೆಗೆ ಸಾಕ್ಷಿಯಾಗಿದೆ.
ಮೇ ತಿಂಗಳಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಮೋದಿ ಮತ್ತು ಬೈಡನ್ ನಡೆಸಿದ ಉಪಯುಕ್ತ ಸಂವಾದವನ್ನು ಮುಂದುವರಿಸಲು ಮತ್ತು ಭಾರತ-ಯುಎಸ್ ಪಾಲುದಾರಿಕೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಹಂಚಿಕೆಯ ದೃಷ್ಟಿಯನ್ನು ಮುಂದುವರಿಸಲು ಇಲ್ಲಿ ಪರಸ್ಪರ ಒಪ್ಪಿಕೊಂಡರು ಎಂದು ವರದಿಗಳು ತಿಳಿಸಿವೆ.
Biden walks upto PM Modi at G7 Summit, shows bonhomie between leaders of democratic world
Read @ANI Story | https://t.co/aKIgknrbsW#JoeBiden #PMModi #G7Summit #PMModiInGermany pic.twitter.com/E9DHcgyorT
— ANI Digital (@ani_digital) June 27, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.