ನವದೆಹಲಿ: ಕೋವಿಡ್-19 ಲಸಿಕೆಗಳು 2021 ರಲ್ಲಿ ಭಾರತದಲ್ಲಿ 42 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಸಾವುಗಳನ್ನು ತಡೆಗಟ್ಟಿವೆ ಎಂದು ಅಧ್ಯಯನ ವರದಿ ಹೇಳಿದೆ.
ಸಾಂಕ್ರಾಮಿಕದ ಸಮಯದಲ್ಲಿ ದೇಶದಲ್ಲಿನ ಹೆಚ್ಚಿನ ಮರಣಗಳ ಅಂದಾಜು ಕಂಡುಹಿಡಿಯಲು ನಡೆಸಿದ ಅಧ್ಯಯನದ ಪ್ರಕಾರ, ಕೋವಿಡ್-19 ಲಸಿಕೆಗಳು ಅಧಿಕ ಪ್ರಮಾಣದ ಸಂಭಾವ್ಯ ಸಾವುಗಳನ್ನು ಕಡಿಮೆಯಾಗಿದೆ.
ಲ್ಯಾನ್ಸೆಟ್ ಇನ್ಫೆಕ್ಟಿಯಸ್ ಡಿಸೀಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಡಿಸೆಂಬರ್ 8, 2020 ಮತ್ತು ಡಿಸೆಂಬರ್ 8, 2021 ರ ನಡುವೆ ತಡೆಗಟ್ಟಲಾದ ಸಾವುಗಳ ಸಂಖ್ಯೆಯನ್ನು ಅಂದಾಜು ಮಾಡಿದೆ. ಈ ಅವಧಿಯಲ್ಲಿ ಮೊದಲ ವರ್ಷದ ಲಸಿಕೆ ಅಭಿಯಾನಗಳನ್ನು ಪರಿಚಯಿಸಲಾಯಿತು.
ಅಧ್ಯಯನದ ಪ್ರಕಾರ, ಕೋವಿಡ್-19 ಲಸಿಕೆಗಳು ಸಾಂಕ್ರಾಮಿಕ ಸಮಯದಲ್ಲಿ ಸಂಭವನೀಯ ಸಾವಿನ ಸಂಖ್ಯೆಯನ್ನು ಸುಮಾರು 20 ಮಿಲಿಯನ್ನಷ್ಟು ಕಡಿಮೆ ಮಾಡಿದೆ. ಲಸಿಕೆ ಕಾರ್ಯಕ್ರಮವು ವಿಶ್ವಾದ್ಯಂತ ಸಂಭಾವ್ಯ 31.4 ಮಿಲಿಯನ್ ಕೋವಿಡ್-19 ಸಾವುಗಳಲ್ಲಿ 19.8 ಮಿಲಿಯನ್ ಸಾವುಗಳನ್ನು ತಡೆದಿದೆ ಎಂದು ಹೇಳಿಕೊಂಡಿದೆ.
“ಭಾರತಕ್ಕೆ ಸಂಬಂಧಿಸಿದಂತೆ, ಈ ಅವಧಿಯಲ್ಲಿ ವ್ಯಾಕ್ಸಿನೇಷನ್ ಮೂಲಕ 42,10,000 ಸಾವುಗಳನ್ನು ತಡೆಗಟ್ಟಲಾಗಿದೆ ಎಂದು ನಾವು ಅಂದಾಜು ಮಾಡುತ್ತೇವೆ. ಇದು ನಮ್ಮ ಕೇಂದ್ರ ಅಂದಾಜಾಗಿದೆ, ಈ ಅಂದಾಜಿನಲ್ಲಿನ ಅನಿಶ್ಚಿತತೆಯು 36,65,000-43,70,000 ರ ನಡುವೆ ಇದೆ,” ಅಧ್ಯಯನದ ಪ್ರಮುಖ ಲೇಖಕ ಆಲಿವರ್ ವ್ಯಾಟ್ಸನ್ ಹೇಳದ್ದಾಋಎ.
“ಅಧ್ಯಯನವು ಭಾರತದಲ್ಲಿನ ಲಸಿಕೆ ಅಭಿಯಾನವು ಲಕ್ಷಾಂತರ ಜೀವಗಳನ್ನು ಉಳಿಸಿದೆ ಎಂದು ತೋರಿಸುತ್ತದೆ. ಇದು ವ್ಯಾಕ್ಸಿನೇಷನ್ ಹೊಂದಿರುವ ಗಮನಾರ್ಹ ಪರಿಣಾಮವನ್ನು ತೋರಿಸುತ್ತದೆ, ವಿಶೇಷವಾಗಿ ಭಾರತದಲ್ಲಿ ಡೆಲ್ಟಾ ರೂಪಾಂತರದ ಪರಿಣಾಮವನ್ನು ಅನುಭವಿಸಿದ ಮೊದಲ ದೇಶವಾಗಿದೆ,” ವ್ಯಾಟ್ಸನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.