ನವದೆಹಲಿ: ಫ್ರಾನ್ಸ್ ನ ಚಟಿರಾಕ್ಸ್ ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್ ವಿಶ್ವಕಪ್ನ ಮಹಿಳಾ 10 ಮೀ. ಏರ್ ರೈಫಲ್ ಸ್ಟಾಂಡಿಂಗ್ ಎಸ್ಎಚ್ 1ರಲ್ಲಿ ಭಾರತದ ಶೂಟರ್ ಅವನಿ ಲೇಖರ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
250.6 ರ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಲಖೇರಾ ಅವರು 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿಕೊಂಡಿದ್ದಾರೆ.
ಪ್ಯಾರಾ ಶೂಟಿಂಗ್ ವಿಶ್ವಕಪ್ ಮಿಶ್ರ 10 ಮೀ. ಏರ್ ರೈಫಲ್ ಸ್ಟಾಡಿಂಗ್ ಎಸ್ಎಚ್2ನಲ್ಲಿ ಶ್ರೀಹರ್ಷ ದೇವರ್ಡಿ ಅವರು 253.1 ಅಂಕದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.
ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಚಾಂಪಿಯನ್ ಅವ್ನಿ ಲಖೇರಾ ಮತ್ತು ಶ್ರೀಹರ್ಷ ದೇವರ್ಡಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ್ದಾರೆ. ದರು.
“ಐತಿಹಾಸಿಕ ಸಾಧನೆಗಾಗಿ ಅವನಿ ಲಖೇರಾ ಅವರಿಗೆ ಅಭಿನಂದನೆಗಳು. ನೀವು ಯಶಸ್ಸಿನ ಹೊಸ ಎತ್ತರವನ್ನು ತಲುಪುತ್ತೀರಿ ಮತ್ತು ಇತರರಿಗೆ ಸ್ಫೂರ್ತಿ ನೀಡುತ್ತಿರಿ. ನಿಮಗೆ ಶುಭವಾಗಲಿ” ಎಂದಿದ್ದಾರೆ
ಮತ್ತೊಂದು ಟ್ವೀಟ್ ”ಶ್ರೀಹರ್ಷ ದೇವರ್ಡಿ ಚಿನ್ನ ಗೆದ್ದಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಅವರ ಸಂಕಲ್ಪ ನಿಜಕ್ಕೂ ಸ್ಪೂರ್ತಿದಾಯಕ. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ಚಿನ್ನದ ಪದಕ ತಂದಿರುವುದಕ್ಕೆ ಹೆಮ್ಮೆ ಆಗಿದೆ” ಎಂದಿದ್ದಾರೆ.
Congratulations @AvaniLekhara for this historic accomplishment. May you keep scaling newer heights of success and inspiring others. My best wishes. https://t.co/V5jb5AMzlV
— Narendra Modi (@narendramodi) June 8, 2022
Proud of Sriharsha Devaraddi for wining the Gold. His determination is truly motivating. Best wishes for his future endeavours. https://t.co/z9g42AHng3
— Narendra Modi (@narendramodi) June 8, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.