ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ನವದೆಹಲಿಯಲ್ಲಿ ಮೊಟ್ಟಮೊದಲ ರಾಷ್ಟ್ರೀಯ ವಾಯು ಕ್ರೀಡಾ ನೀತಿ-2022 ಅನ್ನು ಘೋಷಿಸಿದ್ದಾರೆ. ಈ 2030 ರ ವೇಳೆಗೆ ಭಾರತವನ್ನು ಉನ್ನತ ವಾಯು ಕ್ರೀಡಾ ರಾಷ್ಟ್ರಗಳಲ್ಲಿ ಒಂದನ್ನಾಗಿ ಮಾಡುವುದು ಈ ಕ್ರೀಡಾ ನೀತಿಯ ಉದ್ದೇಶವಾಗಿದೆ.
ಇದು ದೇಶದಲ್ಲಿ ಸುರಕ್ಷಿತ, ಕೈಗೆಟುಕುವ ಮತ್ತು ಸುಸ್ಥಿರ ವಾಯು ಕ್ರೀಡಾ ಪರಿಸರ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಏರೋಬ್ಯಾಟಿಕ್ಸ್, ಬಲೂನಿಂಗ್, ಗ್ಲೈಡಿಂಗ್, ಪ್ಯಾರಾಚೂಟಿಂಗ್, ಪವರ್ಡ್ ಏರ್ಕ್ರಾಫ್ಟ್ ಮತ್ತು ರೋಟರ್ಕ್ರಾಫ್ಟ್ ಸೇರಿದಂತೆ ಹನ್ನೊಂದು ವಾಯು ಕ್ರೀಡೆಗಳನ್ನು ಈ ನೀತಿಯ ಮೂಲಕ ಉತ್ತೇಜಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಂಧಿಯಾ, ಈ ನೀತಿಯು ದೇಶದಲ್ಲಿ ವಾಯು ಕ್ರೀಡಾ ಚಟುವಟಿಕೆಗಳ ದೃಢವಾದ ಪರಿಸರ ವ್ಯವಸ್ಥೆಯನ್ನು ರಚಿಸುತ್ತದೆ. ಈ ವಲಯದಲ್ಲಿ ಒಂದು ಲಕ್ಷ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ಈಗಿರುವ 100 ಕೋಟಿ ರೂಪಾಯಿಗಳಿಂದ 10 ಸಾವಿರ ಕೋಟಿ ರೂಪಾಯಿಗಳಿಗೆ ಆದಾಯವನ್ನು ಹೆಚ್ಚಿಸಲಿದೆ ಎಂದರು.
ನೀತಿಯಡಿ, ಗೊತ್ತುಪಡಿಸಿದ ಪ್ರದೇಶಗಳಲ್ಲಿ ಅನಿಯಂತ್ರಿತ ವಾಯು ಕ್ರೀಡಾ ಚಟುವಟಿಕೆಗಳನ್ನು ಅನುಮತಿಸಲು ಕೆಲವು ಸ್ಥಳಗಳಲ್ಲಿ ಪ್ರತ್ಯೇಕವಾದ ವಾಯು ಸ್ಥಳಗಳನ್ನು ರಚಿಸಲಾಗುವುದು ಎಂದು ಹೇಳಿದರು. ಈ ನೀತಿಯ ಮೂಲಕ ವಾಯು ಕ್ರೀಡಾ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲಾಗುವುದು ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.