ಪಾಟ್ನಾ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಬಿಹಾರದ ಪಾಟ್ನಾದ ಕುಮ್ರಹಾರ್ ಪ್ರದೇಶದಲ್ಲಿ ಕೊಳದ ಪುನರುಜ್ಜೀವನದ ಕಾಮಗಾರಿಯ ಸ್ಥಳದಲ್ಲಿ ಕನಿಷ್ಠ 2,000 ವರ್ಷಗಳಷ್ಟು ಹಳೆಯದಾದ ಇಟ್ಟಿಗೆ ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದೆ.
ಪಾಟ್ನಾ ರೈಲ್ವೆ ನಿಲ್ದಾಣದ ಪೂರ್ವಕ್ಕೆ 6 ಕಿಮೀ ದೂರದಲ್ಲಿರುವ ಕುಮ್ರಹಾರ್ನಲ್ಲಿ ಗುರುವಾರ ಅಗೆಯುವ ಕಾರ್ಯವನ್ನು ನಡೆಸುತ್ತಿದ್ದಾಗ ಅಧಿಕಾರಿಗಳು ಗೋಡೆಗಳ ಅವಶೇಷಗಳನ್ನು ಪತ್ತೆ ಮಾಡಿದ್ದಾರೆ ಎಂದು ಎಎಸ್ಐ-ಪಾಟ್ನಾ ಶಾಖೆ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಗೌತಮಿ ಭಟ್ಟಾಚಾರ್ಯ ಹೇಳಿದ್ದಾರೆ. ಇಲ್ಲಿ ಮೌರ್ಯ ಸಾಮ್ರಾಜ್ಯದ ಅವಶೇಷಗಳು ಹಿಂದೆ ಕಂಡುಬಂದಿತ್ತು.
“ಕೇಂದ್ರದ ಮಿಷನ್ ಅಮೃತ್ ಸರೋವರ ಉಪಕ್ರಮದ ಭಾಗವಾಗಿ ASI ರಕ್ಷಿತ ಕೊಳವನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಕೊಳದ ಒಳಗಿನ ಇಟ್ಟಿಗೆ ಗೋಡೆಗಳು ಮಹತ್ವದ ಆವಿಷ್ಕಾರವಾಗಿದೆ. ASI ತಜ್ಞರ ತಂಡವು ಗೋಡೆಗಳ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯನ್ನು ವಿಶ್ಲೇಷಿಸುತ್ತಿದೆ” ಎಂದು ಭಟ್ಟಾಚಾರ್ಯ ತಿಳಿಸಿದ್ದಾರೆ.
ಈ ಇಟ್ಟಿಗೆಗಳು ಉತ್ತರ ಭಾರತದ ಬಹುಪಾಲು, ಇಂದಿನ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಭಾಗಗಳಲ್ಲಿ ಸುಮಾರು AD 30 ರಿಂದ ಸುಮಾರು 375 ರವರೆಗೆ ಆಳಿದ ಕುಶಾನ್ ಯುಗಕ್ಕೆ ಸೇರಿದವು ಎಂದು ತೋರುತ್ತದೆ, ಆದರೆ ವಿವರವಾದ ವಿಶ್ಲೇಷಣೆಯ ನಂತರವೇ ಯಾವುದೇ ತೀರ್ಮಾನಕ್ಕೆ ಬರಬಹುದು ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.