ನವದೆಹಲಿ: ಪವರ್ ಹೌಸ್ಗಳಿಗೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೇಯ ನಿರಂತರ ಪ್ರಯತ್ನಗಳಿಂದಾಗಿ ಈ ವರ್ಷದ ಮೇ ತಿಂಗಳಲ್ಲಿ ರೈಲ್ವೆಯ ಮಾಸಿಕ ಸರಕು ಲೋಡಿಂಗ್ 131.6 ಮಿಲಿಯನ್ ಟನ್ಗಳಿಗೆ ತಲುಪಿದೆ.
ಮೇ ತಿಂಗಳಲ್ಲಿ 16.89 ಮಿಲಿಯನ್ ಟನ್ ಲೋಡಿಂಗ್ ಹೆಚ್ಚಿದೆ, ಇದು 2021ರ ಇದೇ ಅವಧಿಗಿಂತ 14. 7 ಶೇಕಡಾ ಹೆಚ್ಚಾಗಿದೆ.
ಕಲ್ಲಿದ್ದಲಿನಲ್ಲಿ 10.7 ಮಿಲಿಯನ್ ಟನ್, ಸಿಮೆಂಟ್ ಮತ್ತು ಕ್ಲಿಂಕರ್ನಲ್ಲಿ 2.8 ಮಿಲಿಯನ್ ಟನ್, ಆಹಾರಧಾನ್ಯಗಳಲ್ಲಿ 1.5 ಮಿಲಿಯನ್ ಟನ್ ಮತ್ತು ಇತರ ಸರಕುಗಳಲ್ಲಿ 1.4 ಮಿಲಿಯನ್ ಟನ್ ಲೋಡಿಂಗ್ ನಡೆದಿದೆ.
ಉಕ್ಕಿನ ಸ್ಥಾವರಗಳಿಗೆ ಕಚ್ಚಾ ವಸ್ತು (ಕಬ್ಬಿಣದ ಅದಿರು ಸೇರಿದಂತೆ) ಮತ್ತು ಸಿದ್ಧಪಡಿಸಿದ ಉಕ್ಕು ಲೋಡಿಂಗ್ ಹೊರತುಪಡಿಸಿ, ಎಲ್ಲಾ ಸರಕುಗಳು ಕಳೆದ ವರ್ಷದ ಅವಧಿಗಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿವೆ.
ರೈಲ್ವೇಯು 421 ರೇಕ್ಗಳಿಗಿಂತ ಹೆಚ್ಚು ದೇಶೀಯ ಕಲ್ಲಿದ್ದಲು ಮತ್ತು 22 ರೇಕ್ಗಳಿಗಿಂತ ಹೆಚ್ಚು ಆಮದು ಮಾಡಿಕೊಂಡ ಕಲ್ಲಿದ್ದಲನ್ನು ದಿನನಿತ್ಯದ ಆಧಾರದ ಮೇಲೆ ಹೆಚ್ಚಿನ ದೂರದ ಪ್ರದೇಶಗಳಿಗೆ ಸಾಗಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.