ನವದೆಹಲಿ: ಕೇಂದ್ರ ರಕ್ಷಣಾ ಸಚಿವಾಲಯವು ಮಂಗಳವಾರ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ನೊಂದಿಗೆ 2,971 ಕೋಟಿ ಡಾಲರ್ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಒಪ್ಪಂದದ ಅನ್ವಯ ಬಿಡಿಎಲ್ ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಗೆ ಅಸ್ಟ್ರಾ Mk-I ಕ್ಷಿಪಣಿಗಳನ್ನ ಪೂರೈಕೆ ಮಾಡಲಿದೆ. ಇದ ದೃಷ್ಟಿಗೋಚರ ವ್ಯಾಪ್ತಿ ಮೀರಿದ ಗಾಳಿಯಿಂದ ಗಾಳಿಗೆ ಕ್ಷಿಪಣಿಯಾಗಿದೆ. ಈ ಒಪ್ಪಂದ ಭಾರತದ ರಕ್ಷಣಾ ಉತ್ಪಾದನಾ ವಲಯದ ಸ್ವಾವಲಂಬನೆಯ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಬಿಡಿಎಲ್ ಈ ಕ್ಷಿಪಣಿಗಳು ಮತ್ತು ಅದರ ಜೊತೆಗಿನ ವ್ಯವಸ್ಥೆಗಳ ಉತ್ಪಾದನೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಿಂದ ತಂತ್ರಜ್ಞಾನವನ್ನು ಪಡೆದುಕೊಂಡಿದೆ.
ಈ ಕ್ಷಿಪಣಿಯನ್ನು Su-30 ಯುದ್ಧವಿಮಾನಗಳಲ್ಲಿ ಸಂಪೂರ್ಣವಾಗಿ ಸಂಯೋಜಿಸಲಾಗಿದೆ ಮತ್ತು ಈಗ ಸ್ವದೇಶಿ ತೇಜಸ್ ಲಘು ಯುದ್ಧ ವಿಮಾನದಂತಹ ಇತರ ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಇದ ಹೆಚ್ಚಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಟ್ರಾ ಕ್ರಮೇಣ ಇತರ ಯುದ್ಧ ವಿಮಾನಗಳೊಂದಿಗೆ ವಿಲೀನಗೊಳ್ಳಲಿದೆ. ಕ್ಷಿಪಣಿಯನ್ನು ಭಾರತೀಯ ನೌಕಾಪಡೆಯ MiG-29K ಫೈಟರ್ ಜೆಟ್ಗಳು ಸಹ ಬಳಸುತ್ತವೆ, ಇದು ಭಾರತದ ಏಕೈಕ ವಿಮಾನವಾಹಕ ನೌಕೆ INS ವಿಕ್ರಮಾದಿತ್ಯವನ್ನು ಆಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.