ನವದೆಹಲಿ: ಕೇಂದ್ರ ಸರ್ಕಾರವು 108 ನಗರಗಳಲ್ಲಿ ಸುಮಾರು 10,500 ಬಸ್ಗಳನ್ನು ಓಡಿಸುವ ಸಲುವಾಗಿ ಆರ್ಥಿಕ ನೆರವು ನೀಡಲು ಹೊಸ ಯೋಜನೆಯನ್ನು ತರಲು ಮುಂದಾಗಿದೆ.
ಈ ಉಪಕ್ರಮವು ಎಂಟು ವರ್ಷಗಳವರೆಗೆ ಜಾರಿಯಲ್ಲಿರಲಿದ್ದು, 5 ಲಕ್ಷದಿಂದ 40 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳು ಯೋಜನೆಯಡಿ ಪ್ರೋತ್ಸಾಹಕಗಳನ್ನು ಪಡೆಯಲು ಅರ್ಹತೆ ಪಡೆಯುತ್ತವೆ.
18,000 ಕೋಟಿ ರೂ.ಗಳ ಯೋಜನೆಗೆ ಅಂತರ ಸಚಿವಾಲಯದ ಸಮಿತಿಯು ತನ್ನ ಒಪ್ಪಿಗೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇದೀಗ ಪ್ರಸ್ತಾವನೆಯನ್ನು ನೀಡಲಿದೆ.
ಪ್ರತಿ ಅರ್ಹ ನಗರವು 100 ಬಸ್ಗಳನ್ನು ಯೋಜನೆಯಡಿ ತರಬಹುದು ಅಗತ್ಯವಿದ್ದಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಕಾರ್ಯಾಚರಣೆಯ ವೆಚ್ಚ (OPEX) ಮಾದರಿಯಡಿಯಲ್ಲಿ ಕೇಂದ್ರವು ಈ ಹಣಕಾಸಿನ ನೆರವನ್ನು ಹೊರತರಲಿದೆ. ಅದರಂತೆ, ಈ ಬಸ್ಗಳನ್ನು ಓಡಿಸಲು ನಗರಗಳು ಖಾಸಗಿ ನಿರ್ವಾಹಕರಿಗೆ ಪಾವತಿಸುವ ಪಾವತಿಯ ಪಾಲನ್ನು ನೋಡಲ್ ಸಚಿವಾಲಯ ನೀಡಲಿದೆ.
20 ಲಕ್ಷ-40 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳಿಗೆ ಗುತ್ತಿಗೆದಾರರ ಮೌಲ್ಯದ ಶೇಕಡಾ 25 ರಷ್ಟು ಕೇಂದ್ರವು ನೀಡುತ್ತದೆ. ನಗರಗಳು ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದರೆ, ಕೇಂದ್ರ ಸರ್ಕಾರವು ಒಪ್ಪಂದದ ಮೌಲ್ಯದ 35 ಪ್ರತಿಶತವನ್ನು ಹೊಂದಿರುತ್ತದೆ ಎಂದು ವರದಿಗಳ ತಿಳಿಸಿವೆ.
ಮೊದಲ ಬಾರಿಗೆ ಬಸ್ ಸೇವೆಯನ್ನು ಪ್ರಾರಂಭಿಸುವ ನಗರಗಳು ಹೆಚ್ಚುವರಿ 5 ಪ್ರತಿಶತ ಪಾವತಿಯನ್ನು ಪಡೆಯುತ್ತವೆ. ಸಿಎನ್ಜಿ ಬಸ್ಗಳನ್ನು ಆಯ್ಕೆ ಮಾಎಇದರೆ ಇನ್ನೂ 2 ಶೇಕಡಾ ಸಹಾಯವನ್ನು ಪಡೆಯುತ್ತವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1ನೇ ಫೆಬ್ರವರಿ 2021 ರಂದು ತಮ್ಮ ಬಜೆಟ್ ಭಾಷಣದಲ್ಲಿ ಈ ರೂ 18,000 ಕೋಟಿಯ ಯೋಜನೆಯನ್ನು ಘೋಷಿಸಿದರು. ಕೇಂದ್ರವು ಮೆಟ್ರೋ ರೈಲು ಜಾಲವನ್ನು ವಿಸ್ತರಿಸುತ್ತದೆ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಪಾಲನ್ನು ಹೆಚ್ಚಿಸಲು ಸಿಟಿ ಬಸ್ ಸೇವೆಯನ್ನು ವರ್ಧಿಸುತ್ತದೆ ಎಂದು ಅವರು ಹೇಳಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.