ನವದೆಹಲಿ: ಎಸ್ವಿಎಲ್ (Survey Vessels Large) ಪ್ರಾಜೆಕ್ಟ್ ಅಡಿ ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾಗುತ್ತಿರುವ ನಾಲ್ಕು ನೌಕೆಗಳ ಪೈಕಿ ಎರಡನೆಯ ನೌಕೆ ʼನಿರ್ದೇಶಕ್ʼ ಅನ್ನು ಮೇ.26ರಂದು ತಮಿಳುನಾಡಿನ ಕಟ್ಟುಪಲ್ಲಿಯಲ್ಲಿ ಉದ್ಘಾಟನೆ ಮಾಡಲಾಗಿದೆ. ‘ನಿರ್ದೇಶಕ್ʼ ಸರ್ವೇಕ್ಷಣಾ ಹಡಗಾಗಿದೆ.
ಈ ನೌಕೆಯು ಬಂಗಾಳಕೊಲ್ಲಿಯೊಂದಿಗೆ ತನ್ನ ಮೊದಲ ಸಂಪರ್ಕವನ್ನು ಸಾಧಿಸಲು ಹೊರಟಿದೆ. ಉದ್ಘಾಟನಾ ಸಮಾರಂಭದಲ್ಲಿ ಪೂರ್ವ ನೌಕಾ ಕಮಾಂಡ್ ಇನ್ ಚೀಫ್ ಕಮಾಂಡಿಂಗ್ ಇನ್ ಫ್ಲ್ಯಾಗ್ ಆಫೀಸರ್ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್ಗುಪ್ತಾ ಉಪಸ್ಥಿತರಿದ್ದರು.
ನೌಕಾ ಕಡಲ ಸಂಪ್ರದಾಯಕ್ಕೆ ಅನುಗುಣವಾಗಿ, ವೈಸ್ ಅಡ್ಮಿರಲ್ ಅವರ ಪತ್ನಿ ಸರ್ಬಾನಿ ದಾಸ್ಗುಪ್ತ ಅವರು ಅಥರ್ವ ವೇದದ ಮಂತ್ರ ಉಚ್ಛಾರಣೆಯೊಂದಿಗೆ ನೌಕೆಯನ್ನು ಉದ್ಘಾಟಿಸಿದರು. ಈ ಹಡಗಿಗೆ ಹಿಂದಿನ ‘ನಿರ್ದೇಶಕ್’ ಎಂಬ ಹೆಸರಿನ ಹಡಗಿನ ಹೆಸರನ್ನೇ ಇಡಲಾಗಿದೆ. ಇದು ಭಾರತೀಯ ನೌಕೆಯ ಸರ್ವೇಕ್ಷಣಾ ಹಡಗಾಗಿತ್ತು ಮತ್ತು ಡಿಸೆಂಬರ್ 2014 ರಲ್ಲಿ 32 ವರ್ಷಗಳ ಅದ್ಭುತ ಸೇವೆಯ ನಂತರ ಕಾರ್ಯ ಸ್ಥಗಿತಗೊಳಿಸಿತ್ತು.
ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ & ಇಂಜಿನಿಯರ್ಸ್ (GRSE) ಮತ್ತು L&T ಹಡಗು ನಿರ್ಮಾಣದ ನಡುವಿನ ಸಹಯೋಗದ ಭಾಗವಾಗಿ SVL ನ ನಾಲ್ಕು ಹಡಗುಗಳಲ್ಲಿ ಮೂರರ ಭಾಗಗಳ ನಿರ್ಮಾಣವನ್ನು L&T, ಕಟ್ಟುಪಲ್ಲಿಯಲ್ಲಿ ಕೈಗೊಳ್ಳಲಾಗುತ್ತಿದೆ.
SVL ಹಡಗುಗಳು ಸುಮಾರು 3400 ಟನ್ಗಳಷ್ಟು ಆಳವಾದ ಡಿಸ್ಪ್ಲೇಸ್ಮೆಂಟ್ ಹೊಂದಿವೆ ಮತ್ತು 235 ಸಿಬ್ಬಂದಿಗಳ ಸಾಮರ್ಥ್ಯ ಹೊಂದಿವೆ. ಹಡಗನ್ನು 14 knots ವೇಗದಲ್ಲಿ ಮತ್ತು 18 knots ಗರಿಷ್ಠ ವೇಗದಲ್ಲಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
'Nirdeshak’, a Survey Vessel (Large) of #IndianNavy was launched by Smt Sarbani Dasgupta in the presence of Vice Adm Biswajit Dasgupta, FOCinC, #EasternNavalCommand, the Chief Guest at the event at L&T Kattupalli today. (1/n) pic.twitter.com/ISgrGG0qwY
— Eastern Naval Command (@IN_HQENC) May 26, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.