ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಪತ್ನಿ ಸೋನಾಲ್ ಶಾ ಅವರೊಂದಿಗೆ ಇಂದು ‘ಪ್ರಧಾನಮಂತ್ರಿ ಸಂಗ್ರಹಾಲಯ’ಕ್ಕೆ ಭೇಟಿ ನೀಡಿದರು. ಈ ವಸ್ತು ಸಂಗ್ರಹಾಲಯವನ್ನು ಕಳೆದ ಏಪ್ರಿಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಎಲ್ಲಾ ಪ್ರಧಾನ ಮಂತ್ರಿಗಳಿಗೆ ಗೌರವಾರ್ಥವಾಗಿ ಇದನ್ನು ಉದ್ಘಾಟಿಸಿದ್ದಾರೆ.
ಗೃಹ ಸಚಿವರು ತಮ್ಮ ಪತ್ನಿ ಸೋನಾಲ್ ಶಾ ಅವರೊಂದಿಗೆ ‘ಪ್ರಧಾನಮಂತ್ರಿ ಸಂಗ್ರಹಾಲಯ’ದಲ್ಲಿನ ಪ್ರತಿಯೊಂದು ನಿರ್ದಿಷ್ಟ ಅಂಶಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದರು.
ರಾಷ್ಟ್ರ ರಾಜಧಾನಿಯ ತೀನ್ ಮೂರ್ತಿ ಎಸ್ಟೇಟ್ನಲ್ಲಿರುವ ‘ಪ್ರಧಾನಮಂತ್ರಿ ಸಂಗ್ರಹಾಲಯ’ ನೆಹರು ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ (NMML) ಆವರಣದಲ್ಲಿ ನಿರ್ಮಿಸಲಾದ ಕಟ್ಟಡವಾಗಿದ್ದು, ಇದು ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗುರುತಿಸುತ್ತದೆ.
10,491 ಚದರ ಮೀಟರ್ ವಿಸ್ತೀರ್ಣದಲ್ಲಿ 306 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಲಾದ ಕಟ್ಟಡದ ಲಾಂಛನವು ಚಕ್ರವನ್ನು ಹಿಡಿದಿರುವ ಭಾರತದ ಜನರ ಕೈಗಳನ್ನು ಪ್ರತಿನಿಧಿಸುತ್ತದೆ. ಇದು ರಾಷ್ಟ್ರ ಮತ್ತು ಪ್ರಜಾಪ್ರಭುತ್ವವನ್ನು ಸಂಕೇತಿಸುತ್ತದೆ. ʼಪ್ರಧಾನಮಂತ್ರಿ ಸಂಗ್ರಹಾಲಯ’ವು ವಿಷಯ ಮತ್ತು ಪ್ರದರ್ಶನದ ವೈವಿಧ್ಯತೆಯನ್ನು ಒಳಗೊಳ್ಳಲು ತಂತ್ರಜ್ಞಾನ-ಆಧಾರಿತ ಇಂಟರ್ಫೇಸ್ಗಳನ್ನು ಬಳಸಿಕೊಂಡಿದೆ.
ಹೊಲೊಗ್ರಾಮ್ಗಳು, ವರ್ಚುವಲ್ ರಿಯಾಲಿಟಿ, ವರ್ಧಿತ ರಿಯಾಲಿಟಿ, ಮಲ್ಟಿ-ಟಚ್, ಮಲ್ಟಿ-ಮೀಡಿಯಾ, ಇಂಟರಾಕ್ಟಿವ್ ಕಿಯೋಸ್ಕ್ಗಳು, ಕಂಪ್ಯೂಟರೀಕೃತ ಚಲನ ಶಿಲ್ಪಗಳು, ಸ್ಮಾರ್ಟ್ಫೋನ್ ಅಪ್ಲಿಕೇಶನ್ಗಳು, ಸಂವಾದಾತ್ಮಕ ಪರದೆಗಳು ಮತ್ತು ಅನುಭವದ ಸ್ಥಾಪನೆಗಳು ಪ್ರದರ್ಶನದ ವಿಷಯವನ್ನು ಹೆಚ್ಚು ಸಂವಾದಾತ್ಮಕವಾಗಿಸುತ್ತವೆ.
ಈ ಕಟ್ಟಡವು ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಗ್ಯಾಲರಿಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಎಲ್ಲಾ ಪ್ರಧಾನ ಮಂತ್ರಿಗಳ ಇತಿಹಾಸವನ್ನು ಒಳಗೊಂಡಿದೆ. ಕೊನೆಯಲ್ಲಿ, ಏಪ್ರಿಲ್ 2014 ರವರೆಗೆ ಭಾರತದ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರ ಗ್ಯಾಲರಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.