ನವದೆಹಲಿ: 16 ವರ್ಷದ ಚೆಸ್ ಪ್ರತಿಭೆ ಆರ್ ಪ್ರಜ್ಞಾನಂದ ಅವರು ಈ ವರ್ಷ ಎರಡನೇ ಬಾರಿಗೆ ಚೆಸ್ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಚೆಸ್ಸೇಬಲ್ ಮಾಸ್ಟರ್ಸ್ ಆನ್ಲೈನ್ ರಾಪಿಡ್ ಚೆಸ್ನ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಪ್ರಜ್ಞಾನಂದ ಸೋಲಿಸಿದ್ದಾರೆ. ಈ ವರ್ಷದ ಆರಂಭದಲ್ಲೂ ಪ್ರಜ್ಞಾನಂದ ಅವರು ಕಾರ್ಲ್ಸನ್ರನ್ನು ಸೋಲಿಸಿದ್ದರು, ಇದೀಗ ಮೂರು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ನಾರ್ವೇಜಿಯನ್ ಆಟಗಾರನನ್ನು ಸೋಲಿಸಿದ್ದಾರೆ.
ಚೆಸ್ಸಬಲ್ ಮಾಸ್ಟರ್ಸ್ 16 ಆಟಗಾರರ ಆನ್ಲೈನ್ ಕ್ಷಿಪ್ರ ಚೆಸ್ ಪಂದ್ಯಾವಳಿಯಾಗಿದೆ. ಕಾರ್ಲ್ಸೆನ್ ಮತ್ತು ಪ್ರಜ್ಞಾನಂದ ನಡುವಿನ ಸ್ಪರ್ಧೆಯು ಡ್ರಾದತ್ತ ಸಾಗಿತು ಆದರೆ ಕಾರ್ಲ್ಸನ್ ತನ್ನ 40 ನೇ ನಡೆಯಲ್ಲಿ ದೊಡ್ಡ ತಪ್ಪು ಮಾಡಿ ಎಡವಿದ್ದಾರೆ.
ಈ ಹಿಂದೆ, ಈ ವರ್ಷದ ಫೆಬ್ರವರಿಯಲ್ಲಿ ಏರ್ಥಿಂಗ್ಸ್ ಮಾಸ್ಟರ್ಸ್ ಆನ್ಲೈನ್ ರ್ಯಾಪಿಡ್ ಟೂರ್ನಮೆಂಟ್ನಲ್ಲಿ ಪ್ರಜ್ಞಾನಂದ ಅವರು ಕಾರ್ಲ್ಸೆನ್ಗಿಂತ ಉತ್ತಮ ಸಾಧನೆ ಮಾಡಿದ್ದರು.
ಚೆಸ್ಸಬಲ್ ಮಾಸ್ಟರ್ಸ್ನ 2ನೇ ದಿನದ ನಂತರ, ಕಾರ್ಲ್ಸನ್ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.