ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಡೆಫ್ಲಿಂಪಿಕ್ಸ್ 2021 ರಲ್ಲಿ ಎಂಟು ಚಿನ್ನ ಸೇರಿದಂತೆ 16 ಪದಕಗಳನ್ನು ಗಳಿಸಿದ ಕ್ರೀಡಾಳುಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂವಾದ ನಡೆಸಿದ್ದಾರೆ.
ಡೆಫ್ಲಿಂಪಿಕ್ಸ್ 2021 ದಕ್ಷಿಣ ಬ್ರೆಜಿಲ್ನ ಕ್ಯಾಕ್ಸಿಯಾಸ್ ಡೊ ಸುಲ್ ನಗರದ ಫೆಸ್ಟಾ ಡ ಉವಾ ಮುಖ್ಯ ಪೆವಿಲಿಯನ್ನಲ್ಲಿ ನಡೆದಿತ್ತು.
ಚತುರ್ವಾರ್ಷಿಕ ಈವೆಂಟ್ ಮೇ 1 ರಂದು ಪ್ರಾರಂಭವಾಗಿ, ಮೇ 15 ರಂದು ಮುಕ್ತಾಯಗೊಂಡಿತು, 72 ದೇಶಗಳ ಸುಮಾರು 2,100 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.
ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ಏಳು ಕಂಚು ಸೇರಿದಂತೆ 16 ಪದಕಗಳನ್ನು ಗೆಲ್ಲುವ ಮೂಲಕ ಡೆಫ್ಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. 11 ಕ್ರೀಡಾ ವಿಭಾಗಗಳಲ್ಲಿ 65 ಅಥ್ಲೀಟ್ಗಳ ತಂಡವನ್ನು ಭಾರತ ಕಳುಹಿಸಿತ್ತು.
ಡೆಫ್ಲಿಂಪಿಯಾಡ್ ಎಂದೂ ಕರೆಯಲ್ಪಡುವ ಡೆಫ್ಲಿಂಪಿಕ್ಸ್ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಅನುಮೋದಿಸಲ್ಪಟ್ಟ ಬಹು-ಕ್ರೀಡಾ ಕಾರ್ಯಕ್ರಮಗಳ ಸರಣಿಯಾಗಿದ್ದು, ಇದರಲ್ಲಿ ಕಿವುಡ ಕ್ರೀಡಾಪಟುಗಳು ಸ್ಪರ್ಧಿಸುತ್ತಾರೆ.
Our Brazil 2021 #Deaflympians will be felicitated by the Honourable Prime Minister Shri @narendramodi at his residence today
Here are stills 📸 as they head out#JeetKaJazba#Deaflympics2021 pic.twitter.com/5M2jdJLugO
— SAI Media (@Media_SAI) May 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.